

ಹುಣಸೂರು: ತಾಲೂಕು ಹನುಮಂತ್ಯುತ್ಸವ ಸಮಿತಿಯಿಂದ ಹನುಮ ಜಯಂತಿ ಆಚರಣೆಯ ನಾಲ್ಕನೇ ದಿನ ಹನುಮ ಯಜ್ಞ ಕಾರ್ಯಕ್ರಮ ಜರುಗಿತು.
ಪಟ್ಟಣದ ಬ್ರಾಹ್ಮಣರ ಬೀದಿಯ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ 1 ಸಾವಿರ ಹನುಮ ಭಕ್ತರು ಬರೆದ ಹನುಮ ಜಪಮಂತ್ರದ ಪುಸ್ತಕಗಳನ್ನು ಅಗ್ನಿಕುಂಡಕ್ಕೆ ಸಮರ್ಪಿಸಲಾಯಿತು.
ಈ ವೇಳೆ ಮಾತನಾಡಿದ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, 1 ಸಾವಿರ ಹನುಮಭಕ್ತರು ಸಾವಿರದ ಒಂದು ಬಾರಿ ಬರೆದ ಹನುಮ ಜಪಮಂತ್ರದ ಯಜ್ಞ ನಡೆಯುವ ಮೂಲಕ ಈ ಬಾರಿ ಹನುಮ ಜಯಂತಿ ಕಾರ್ಯಕ್ರಮ ಸಂಪನ್ನಗೊಂಡಿದೆ. ತಾಲೂಕಿನಾದ್ಯಂತ ಹನುಮ ಭಕ್ತರು 4 ದಿನಗಳ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಹನುಮ ಭಕ್ತರ ಭಾವನೆಗೆ ಪೂರಕವಾಗಿ ಜವಾಬ್ದಾರಿ ನಿರ್ವಹಿಸಿರುವ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಸಮಿತಿ ಗೌರವಾಧ್ಯಕ್ಷ ಬಿ.ಎಸ್.ಯೋಗಾನಂದಕುಮಾರ್, ಎಚ್.ವೈ.ಮಹದೇವ್, ಬಾರ್ ಚಂದ್ರು, ಸೂರಜ್ ನಾರಾಯಣ್, ಅರ್ಚಕ ಶ್ರೀಹರಿ ಇದ್ದರು.