ಹುಣಸಮ್ಮತಾಯಿ ಜಾತ್ರೆ ಇಂದಿನಿಂದ

berya 1
ಶ್ರೀ ಹುಣಸಮ್ಮತಾಯಿ
Published on

ಭೇರ್ಯ: ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಮಾ.3 ಮತ್ತು 4ರಂದು ಶಕ್ತಿ ದೇವತೆ ಶ್ರೀ ಹುಣಸಮ್ಮತಾಯಿಯ ಸಿಡಿ ಮತ್ತು ಜಾತ್ರಾ ಮಹೋತ್ಸವ ನಡೆಯಲಿದೆ.

ಒಂಬತ್ತು ಗ್ರಾಮಗಳ ಜನರು ಜಾತ್ರೆಯ ಮುಂದಾಳತ್ವ ವಹಿಸಿಕೊಂಡಿದ್ದು, ಜಾತ್ರಾ ಮಹೋತ್ಸವಕ್ಕೆ ಸಮಿತಿ ವತಿಯಿಂದ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಿರ್ಲೆ, ನರಚನಹಳ್ಳಿ, ಬೀಚನಹಳ್ಳಿ, ಬೀಚನಹಳ್ಳಿ ಕೊಪ್ಪಲು, ಕೊಡಿಯಾಲ, ಹಳೇ ಮಿರ್ಲೆ, ಹನುಮನಹಳ್ಳಿ, ನಾಟನಹಳ್ಳಿ, ಶಾಬಾಳು, ಮಾಳನಾಯಕನಹಳ್ಳಿಯಲ್ಲಿ ಮಾ.3ರಂದು ಸಿಡಿ ಉತ್ಸವಕ್ಕೆ ಸಿಂಗಾರ ಕಾರ್ಯ ನಡೆಯಲಿದೆ.

ಮಾ.4 ರಂದು ಮುಂಜಾನೆ ದೇವಸ್ಥಾನದಲ್ಲಿ ವಿಧಿವಿಧಾನಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯ, ತಾಯಿಗೆ ತಂಬಿಟ್ಟಿನ ಆರತಿ, ನಡೆಯಲಿದೆ. ನಂತರ ವಿವಿಧ ನಡೆಯಲಿದೆ.

ಮಾ.3, 4ರಂದು ಸಿಡಿ ಉತ್ಸವ ಮತ್ತು ರಥೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಹಕರಿಸಬೇಕು. ದೇವಿ ದರ್ಶನ ಪಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ.

> ಧನಂಜಯ್ ದೇವಸ್ಥಾನ ಸಮಿತಿಯ ಮುಖ್ಯಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net