

StartFragment
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿರುವ ನಾಗೇಶ ಕಲಬುರ್ಗಿ ಅವರು ಅವಳಿ ನಗರದ ವ್ಯವಸ್ಥಿತ ಅಭಿವೃದ್ಧಿ ವಿಷಯದಲ್ಲಿ ತಮ್ಮದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ, ಇತ್ತೀಚೆಗೆ ಅವರು ಅಕ್ರಮ ಲೇಔಟ್ಗಳ ವಿರುದ್ಧ ಸಮರ ಸಾರಿದ್ದಾರೆ. ಸಿಡಿಪಿ, ಒಡಿಪಿಗಳು ಅಂಗೀಕಾರವಾಗಿರುವುದರಿಂದ ಹು-ಧಾ ನಗರಗಳು ಅಭಿವೃದ್ಧಿಯಲ್ಲಿ ಸ್ಥಿರತೆ ಸಾಧಿಸಲು ಅನುವಾಗುತ್ತದೆ ಎಂದು ಭಾವಿಸಲಾಗಿದೆ. ನಗರದ ವ್ಯವಸ್ಥಿತ ಅಭಿವೃದ್ಧಿ, ಸೌಂದಯೀಕರಣ, ಹುಡಾ ಕಾರ್ಯ ಚಟುವಟಿಕೆಗಳು, ಕೈಗೊಂಡಿರುವ ಕಾರ್ಯಕ್ರಮ, ಹೊಸ ಯೋಜನೆಗಳು, ಅಕ್ರಮ ಲೇಔಟ್ಗಳ ವಿರುದ್ಧದ ಕ್ರಮ, ಹೊಸ ವಸತಿ ಬಡಾವಣೆಗಳ ನಿರ್ವಣ, ಸರ್ಕಾರದ ಅಕ್ರಮ-ಸಕ್ರಮ ಯೋಜನೆ ಜಾರಿ ಮೂಲಕ ಹಲವಾರು ವರ್ಷದಿಂದ ಬಾಕಿ ಇರುವ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರೊಂದಿಗೆ ನಾಗರಿಕರು ನೇರವಾಗಿ ಮಾತನಾಡಲು ಕನ್ನಡದ ನಂ. ದಿನಪತ್ರಿಕೆ ವಿಜಯವಾಣಿ ಒಂದು ಉತ್ತಮ ಅವಕಾಶ ಕಲ್ಪಿಸಿಕೊಡುತ್ತಿದೆ.
ಕಾರ್ಯಕ್ರಮದಲ್ಲಿ ಹುಡಾ ಆಯಕ್ತ ಎನ್.ಎಚ್. ಕುಮ್ಮಣ್ಣವರ, ಹಿರಿಯ ಅಧಿಕಾರಿಗಳಾದ ವಿವೇಕ ಕಾರೇಕರ, ಎಂ. ರಾಜಶೇಖರ, ಎಸ್.ಡಿ. ಗುಂಜಾಳ, ಬಸವರಾಜ ದೇವಗಿರಿ, ಎಂ.ಎಂ. ಶೀಲವಂತರ, ಬಸಂತಿ ಪಾಟೀಲ, ಎಚ್. ಪ್ರಾಣೇಶ, ಚಂದ್ರಶೇಖರ ಮಾಲಿಪಾಟೀಲ ಸಹ ಇರುತ್ತಾರೆ. ಅಭಿವೃದ್ಧಿಗೆ ಸಂಬಂಧಿಸಿ ಅಪರೂಪದ ಚಿಂತನೆ, ಸಲಹೆಗಳಿದ್ದರೂ ಸಾರ್ವಜನಿಕರು ಸಂಕ್ಷಿಪ್ತವಾಗಿ ತಿಳಿಸಬಹುದಾಗಿದೆ. ಆಸಕ್ತರು ಜುಲೈ 30ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗಿನ ಅವಧಿಯಲ್ಲಿ (0836) 2250931/32 ಸಂಖ್ಯೆಗೆ ಕರೆ ಮಾಡಿ...
EndFragment