ಹುಚ್ಚುರಾಯಸ್ವಾಮಿ ಕೆರೆಯಲ್ಲಿ ದುರ್ವಾಸನೆ

28 skp 4 (1)
ಶಿಕಾರಿಪುರದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಮೃತಪಟ್ಟಿರುವ ಮೀನುಗಳು.
Published on

ಶಿಕಾರಿಪುರ: ಶ್ರೀ ಹುಚ್ಚುರಾಯಸ್ವಾಮಿ ಕೆರೆ ಆವರಣದಲ್ಲಿ ಪ್ರತಿನಿತ್ಯವೂ ನೂರಾರು ಜನ ವಾಯುವಿಹಾರಕ್ಕೆ ತೆರಳುತ್ತಾರೆ. ಆದರೆ ಕೆಲವು ದಿನಗಳಿಂದ ಈ ಕೆರೆಯಲ್ಲಿ ಸತ್ತ ಮೀನುಗಳ ದುರ್ವಾಸನೆ ಬರುತ್ತಿರುವುದರಿಂದ ವಾಯುವಿಹಾರಿಗಳಿಗೆ ಕಿರಿಕಿರಯಾಗುತ್ತಿದೆ. ಕೆರೆ ಪಕ್ಕದ ಶ್ರೀ ಭ್ರಾಂತೇಶ ಉದ್ಯಾನದ ಸುತ್ತಲೂ ಪಾದಚಾರಿ ಮಾರ್ಗವಿರುವುದರಿಂದ ಇಲ್ಲಿ ಬಹಳಷ್ಟು ಜನ ವಾಯುವಿಹಾರಕ್ಕೆ ಆಗಮಿಸುತ್ತಾರೆ. ಕೆಲ ದಿನಗಳಿಂದ ಸತ್ತ ಮೀನುಗಳ ದುರ್ವಾಸನೆ ಬರುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೆರೆ ನೀರಾವರಿ ಇಲಾಖೆ ಅಧೀನದಲ್ಲಿದೆ. ಕೆರೆ ಹಾಗೂ ಉದ್ಯಾನ ನಿರ್ವಹಣೆಯಲ್ಲಿ ಹಲವು ಲೋಪಗಳಾಗುತ್ತಿವೆ. ವಿದ್ಯುತ್, ಶೌಚಗೃಹದ ಸಮಸ್ಯೆ, ದುರಸ್ತಿಗಾಗಿ ಕಾಯುತ್ತಿರುವ ಸಂಗೀತ ಕಾರಂಜಿ ಇನ್ನೂ ಹಲವು ಸಮಸ್ಯೆಗಳು ಇಲ್ಲಿವೆ. ಕೆರೆಗೆ ಅಂಜನಾಪುರ ಜಲಾಶಯದಿಂದ ಹರಿದು ಬರುವ ನೀರಿಗೆ ಪಟ್ಟಣದ ಹೊರವಲಯದ ಆಶ್ರಯ ಬಡಾವಣೆ, ಚನ್ನಕೇಶವ ನಗರ, ವಿನಾಯಕ ನಗರದ ತ್ಯಾಜ್ಯದ ನೀರು ಸೇರುತ್ತದೆ. ಈ ಕಾರಣಕ್ಕೆ ಕೆಲ ದಿನದಿಂದ ಕೆರೆಯಲ್ಲಿ ನಿತ್ಯ ಮೀನುಗಳು ಸಾವಿಗೀಡಾಗುತ್ತಿವೆ. ದಡದಲ್ಲಿ ತೇಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬೆಳಗಿನ ಜಾವ ಹಾಗೂ ಸಂಜೆ ವಾಯು ವಿಹಾರಕ್ಕೆ ತೆರಳುವ ನೂರಾರು ನಾಗರಿಕರು ದುರ್ವಾಸನೆಯಿಂದಾಗಿ ಬೇಸತ್ತಿದ್ದಾರೆ.

ಸ್ಥಳೀಯ ಕುಮದ್ವತಿ ಮೀನುಗಾರರ ಸಹಕಾರ ಸಂಘಕ್ಕೆ ಮೀನುಗಾರಿಕೆ ಟೆಂಡರ್ ನೀಡಲಾಗಿದೆ. ಮೀನುಗಾರರು ಬಲೆಯಲ್ಲಿ ಸಿಲುಕಿ ಮೆತ್ತಗಾದ ಕೆಲ ಮೀನುಗಳನ್ನು ಅಲ್ಲಿಯೇ ಬಿಸಾಡುತ್ತಿದ್ದಾರೆ. ಇದರಿಂದಾಗಿ ಕೆಲ ಮೀನುಗಳು ಮಾತ್ರ ತೇಲುತ್ತಿವೆ. ಈ ಬಗ್ಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕೆರೆಗೆ ಕೊಳಚೆ ನೀರು ಸೇರುತ್ತಿರುವುದರಿಂದ ದುರ್ವಾಸನೆ ಬರುತ್ತಿದೆ ಎಂಬ ಅನುಮಾನವಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ವಿನಯ್ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net