

ಹನಗೋಡು: ಸಮೀಪದ ಕಿರಂಗೂರು ಹಾಗೂ ಅಂಬೇಡ್ಕರ್ ಹೊಸೂರಿನಲ್ಲಿ ಹುಚ್ಚುನಾಯಿ ಕಡಿತಕ್ಕೆ ಒಳಗಾಗಿದ್ದ ಎರಡು ದನಗಳು ಇತ್ತೀಚೆಗೆ ಸಾವನ್ನಪ್ಪಿವೆ. ಕಿರಂಗೂರು ಗ್ರಾಮದ ಸಿದ್ದಾಚಾರ್ ಹಾಗೂ ಅಂಬೇಡ್ಕರ್ ಹೊಸೂರಿನ ದಂಡಯ್ಯನ ಸ್ವಾಮಿ ಅವರ ದನಗಳು ಹುಚ್ಚು ನಾಯಿ ಕಡಿತಕ್ಕೊಳಗಾಗಿ ಸಾವನ್ನಪ್ಪಿವೆ. ಕಳೆದ ಆಯುಧ ಪೂಜೆ ದಿನದಂದು ಜಮೀನಿನಲ್ಲಿ ಮೇಯುತ್ತಿದ್ದ ಸುಮಾರು 10-12 ಜಾನುವಾರುಗಳಿಗೆ ಹುಚ್ಚುನಾಯಿ ಕಚ್ಚಿ ಗಾಯಗೊಳಿಸಿತ್ತು. ತಕ್ಷಣವೇ ದನಗಾಯಿಗಳು ನಾಯಿಯನ್ನು ಕೊಂದುಹಾಕಿದ್ದರು. ನಾಯಿ ದಾಳಿಗೆ ಒಳಗಾಗಿದ್ದ ಜಾನುವಾರುಗಳಿಗೆ ಯಾವುದೇ ಲಸಿಕೆ ಹಾಕಿಸದಿದ್ದರಿಂದ ಕಳೆದ ಎರಡು ದಿನಗಳಿಂದ ಜಾನುವಾರುಗಳು ಜೊಲ್ಲು ಸುರಿಸಿಕೊಂಡು ರೌದ್ರಾವತಾರ ತಾಳುತ್ತಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.