ಹುಚ್ಚು ನಾಯಿ ಕಚ್ಚಿ 9 ಜನರಿಗೆ ಗಾಯ

9byd4
Published on

ಬ್ಯಾಡಗಿ: ಪಟ್ಟಣದ ಗಾಂಧಿ ನಗರ, ಕೋಳೂರು ಕ್ಯಾಂಪ್ ಹಾಗೂ ರ್ಬಾ ಓಣಿಯಲ್ಲಿ ಹುಚ್ಚು ನಾಯಿ ಕಚ್ಚಿ 9 ಜನರು ಗಾಯಗೊಂಡ ಘಟನೆ ಭಾನುವಾರ ಜರುಗಿದೆ.

ಯಶವಂತ ಗುದಗಿ, ಸುಶೀಲಮ್ಮ ಬಣಕಾರ, ರೇಖಾ ಕುದರಿಹಾಳ, ಪ್ರಮೋದ ಪೂಜಾರ, ರೋಹಿತ ಕುರವಂತಿ, ನಾಗಪ್ಪ ಸಂಪಣ್ಣನವರ, ವೈಷ್ಟವಿ ವಡ್ಡರ, ತ್ರಿಶಾ ಹಾವೇರಿ, ಅಮಿತ್ ದಂದೂರಮಠ ಗಾಯಗೊಂಡವರು. ಇವರಿಗೆ ಬ್ಯಾಡಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚುವರಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಎರಡು ದಿನಗಳಿಂದ ಪಟ್ಟಣದ ವಿವಿಧೆಡೆ ಹುಚ್ಚು ನಾಯಿ ಓಡಾಡುತ್ತಿರುವುದು ಸಾರ್ವಜನಿಕರ ನಿದ್ದೆಗೆಡಿಸಿದೆ. ಶನಿವಾರ ತಡರಾತ್ರಿ ಇಬ್ಬರು ಮಕ್ಕಳನ್ನು ಹಾಗೂ ಭಾನುವಾರ 7 ಜನರನ್ನು ಕಚ್ಚಿದ ನಾಯಿಯನ್ನು ಜನರು ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.

ಪಟ್ಟಣದ ಎಸ್​ಜೆಜೆಎಂ ಶಾಲೆಯ ಬಳಿ ಹಾಗೂ ಕೊಳಗೇರಿ ಏರಿಯಾದಲ್ಲಿ ನಾಯಿಗಳ ಹಿಂಡು ಹೆಚ್ಚಾಗಿದೆ. ಬಹುತೇಕ ನಾಯಿಗಳಿಗೆ ಕಜ್ಜಿ ಹಾಗೂ ಚರ್ಮಕಾಯಿಲೆಗಳು ಹೆಚ್ಚಿದ ಪರಿಣಾಮ ಜನರು ಆತಂಕದಲ್ಲಿದ್ದಾರೆ. ಕೂಡಲೆ ಪುರಸಭೆ ಅಧಿಕಾರಿಗಳು ನಾಯಿ ಹಾಗೂ ಹಂದಿಗಳನ್ನು ಸೆರೆ ಹಿಡಿದು ಪಟ್ಟಣದಿಂದ ಹೊರಗೆ ಸಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net