ಹುಚ್ಚೀರಪ್ಪಜ್ಜನ ಸಂಭ್ರಮ ಲಘುರಥೋತ್ಸವ

5Naregal3
Published on

ನರೇಗಲ್ಲ: ಸಮೀಪದ ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಲಘುರಥೋತ್ಸವವು ಬುಧವಾರ ನೂರಾರು ಭಕ್ತರ ಮಧ್ಯೆ ಸಡಗರ, ಸಂಭ್ರಮದಿಂದ ಜರುಗಿತು. ಕೋಡಿಕೊಪ್ಪದ ಹಠಯೋಗಿ ಹುಚ್ಚೀರೇಶ್ವರ ಮಹಾರಾಜ್ ಕೀ ಜೈ ಎಂಬ ಘೊಷಣೆಗಳೊಂದಿಗೆ ಭಕ್ತರು ಲಘುರಥೋತ್ಸವ ಎಳೆದು ಸಂಭ್ರಮಿಸಿದರು. ಲಘುರಥವು ಪಾದಗಟ್ಟಿ ತಲುಪಿ ಮೂಲಸ್ಥಳಕ್ಕೆ ವಪಸಾಯಿತು. ಮಹಿಳೆಯರು ಆರತಿ, ಕುಂಭ, ಡೊಳ್ಳು ಕುಣಿತ, ಭಜನೆ, ಮಜಲು ವಾದ್ಯಮೇಳಗೊಂದಿಗೆ ಆದ್ಧೂರಿಯಾಗಿ ಜರುಗಿತು. ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಭಕ್ತರು ಲಘುರಥೋತ್ಸವದಲ್ಲಿ ಭಾಗಿಯಾಗಿ ಅಜ್ಜನ ಆರ್ಶೀವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net