

ಕೆಂಭಾವಿ: ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಅವರಿಗೆ ತಮ್ಮ ಪಕ್ಷದ ಟಿಕೆಟ್ ಕೈತಪ್ಪಿದ್ದರ ಹಿನ್ನೆಲೆಯಲ್ಲಿ ಹುಚ್ಚನಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹರಿಹಾಯ್ದರು.
ಈ ಕುರಿತು ಶಾಸಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಶಹಾಪುರ ನಗರದಲ್ಲಿ ನಡೆದ ಗಣೇಶೋತ್ಸವದ ಮೆರವಣಿಗೆ ವೇಳೆ ತಮ್ಮ ವಿರುದ್ಧ ಪ್ರತಾಪ್ ಸಿಂಹ ಮಾಡಿದ್ದ ಆರೋಪಕ್ಕೆ ಉತ್ತರಿಸಿದ ಸಚಿವ ದರ್ಶನಾಪುರ, ನಾನೊಬ್ಬ ಹಿಂದು ವಿರೋಧಿ ಎಂಬ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ. ನನ್ನ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದು ರಾಜಕೀಯ ಮಾತನಾಡುವ ಅವರ ಯೋಗ್ಯತೆ ಎಷ್ಟಿದೆ ಎಂಬುದು ಈಗಾಗಲೇ ನನ್ನ ಕ್ಷೇತ್ರದ ಜನ ಅರಿತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕೆAಭಾವಿ ಪಟ್ಟಣದ ಬಜಾರ ಮಾರುತಿ ದೇವಸ್ಥಾನಕ್ಕೆ ೩೦ ಲಕ್ಷ, ರೇವಣಸಿz್ದೆÃಶ್ವರ ದೇವಸ್ಥಾನಕ್ಕೆ ೩೦ ಲಕ್ಷ ಹಾಗೂ ಶರಣಬಸವೇಶ್ವರ ದೇವಸ್ಥಾನಕ್ಕೆ ೫೦ ಲಕ್ಷ ರೂ. ಸೇರಿ ವಲಯದ ಮಾಳಹಳ್ಳಿ, ಫತ್ತೇಪುರ, ಬೊಮ್ಮನಹಳ್ಳಿ, ಮಲ್ಲಾ ಬಿ, ನಡಕೂರ, ಕಿರದಳ್ಳಿ ತಾಂಡಾ, ಯಾಳಗಿ, ಗುತ್ತಿಬಸವೇಶ್ವರ ಗ್ರಾಮಗಳ ಹಲವು ದೇವಸ್ಥಾನಗಳ ಅಭಿವೃದ್ಧಿಗೆ ಹೊದಲ ಹಂತವಾಗಿ ೧೦ ಕೋಟಿಗೂ ಅಧಿಕ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಈ ವೇಳೆ ಮೂವರು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಚಿಂಚೋಳಿ, ಶಂಕ್ರಣ್ಣ ವಣಿಕ್ಯಾಳ, ವಾಮನರಾವ ದೇಶಪಾಂಡೆ, ಶಾಂತಗೌಡ ನೀರಲಗಿ, ಶಿವಮಹಾಂತ ಚಂದಾಪುರ, ಶರಣಬಸ್ಸು ಡಿಗ್ಗಾವಿ, ಬಾಪುಗೌಡ ಪಾಟೀಲ್, ಸಾಹೇಬ್‌ಲಾಲ್ ಆಂದೇಲಿ ಇದ್ದರು.