‘ಹುಚ್ಚ’ನ ಬಗ್ಗೆ ಯಾರಾದರೂ ಮಾತನಾಡುತ್ತಾರಾ?

09082022 h Anjaneya
Published on

ಚಿತ್ರದುರ್ಗ:ಸಿಎಂ ಸಿದ್ದರಾಮಯ್ಯರ ಕುರಿತು ಹಗುರುವಾಗಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆ ಒಬ್ಬ,ಹುಚ್ಚರ ಬಗ್ಗೆ ಯಾರಾದರು ಮಾ ತನಾಡುತ್ತಾರಾ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವ ಎಚ್.ಆಂಜನೇಯ ಅವರು, ಅನಂತಕುಮಾರ್ ವಿರುದ್ಧ ತೀವ್ರ ಆ ಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಂಜನೇಯ, ಅನಂತಕುಮಾರ್ ಒಬ್ಬ ಮನುಷ್ಯನಾ? ಆತ ಹುಚ್ಚ,ಅವನ ಬಗ್ಗೆ ಮಾತಾಡಲ್ಲ. ಮಾತಾಡಿದರೆ ಆತನನ್ನು ದೊಡ್ಡವನನ್ನಾಗಿ ಮಾಡಿದಂತಾಗುತ್ತದೆ.‘ಅವನ ಹಿನ್ನೆಲೆ, ಸಂಸ್ಕೃತಿ ಅದೇ ರೀತಿ ಇರಬೇಕು. ಹೀಗಾಗಿ ಅವನು ಆ ರೀತಿ ವರ್ತಿಸುತ್ತಿದ್ದಾನೆ. ನಾನೂ ಏಕವಚನ ಬಳಸಬಾರದು. ಆದರೆ ಅವನಿಗೆ ಯಾವ ಭಾಷೆ ಬಳಸಿದರೂ ಕೂಡ ಸಾಲದೆಂ ದರು.
ಬಿಜೆಪಿ ರಾಮನ ಹೆಸರಲ್ಲಿ ಮತ ವ್ಯಾಪಾರಕ್ಕೆ ಮುಂದಾಗಿದೆ. ಕಾಂಗ್ರೆಸ್ ಸರ್ಕಾರ ಹಿಂದು,ಶ್ರೀರಾಮನ ವಿರೋಧಿ ಎಂಬ ಸಂಸದ ಮುನಿಸ್ವಾಮಿ ಹೇಳಿಕೆಗೆ. ಬಹಳಷ್ಟು ಜನ ಹಿಂದುಗಳಿರುವುದೇ ಕಾಂಗ್ರೆಸ್ಸಿನಲ್ಲಿ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯ ದಲ್ಲಿ ರಾಮನಿದ್ದಾನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net