ಹುಕ್ಕೇರಿ ತಾಲೂಕು ಬರಪೀಡಿತ ಘೋಷಿಸಲಿ

6
ಹುಕ್ಕೇರಿ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಆಡಳಿತ ನೀತಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಪವನ ಕತ್ತಿ, ಡಾ.ರಾಜೇಶ ನೇರ್ಲಿ, ಸತ್ಯಪ್ಪ ನಾಯಿಕ, ರಾಚಯ್ಯ ಹಿರೇಮಠ, ಸವಿತಾ ಏಣಗಿಮಠ ಇತರರಿದ್ದರು.
Published on

ಹುಕ್ಕೇರಿ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ, ಅನಿಯಮಿತ ವಿದ್ಯುತ್​ ಕಡಿತ ಮಾಡುತ್ತಿದೆ ಎಂದು ಆರೋಪಿಸಿ, ಹುಕ್ಕೇರಿ ತಾಲೂಕು ಬರಪೀಡಿತ ಪ್ರದೇಶವೆಂದು ೂಷಿಸಲು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸೋಮವಾರ ಪ್ರತಿಭಟಿಸಿದರು.

ಪಟ್ಟಣದ ಪಿಕಾರ್ಡ್​ ಬ್ಯಾಂಕ್​ ಆವರಣದಿಂದ ಸರ್ಕಾರದ ವಿರುದ್ಧ ೂಷಣೆ ಕೂಗುತ್ತ ಕೋರ್ಟ್​ ವೃತ್ತ ತಲುಪಿತು. ಜಿಪಂ ಮಾಜಿ ಸದಸ್ಯ ಪವನ ರಮೇಶ ಕತ್ತಿ ಮಾತನಾಡಿ, ಈ ವರ್ಷ ಮಳೆ ಕೊರತೆಯಿಂದ ಬೆಳೆ ಹಾಳಾಗಿದೆ. ಜನ, ಜಾನುವಾರುಗಳಿಗೆ ಕಡಿಯುವ ನೀರಿನ ಸಮಸ್ಯೆಯಾಗಿದೆ. ಲಭ್ಯ ನೀರನ್ನು ಬಳಸಲು ವಿದ್ಯುತ್​ ಸಹ ಕೊಡುತ್ತಿಲ್ಲ . ಬಿಜೆಪಿ ಜಾರಿಗೆ ತಂದಿದ್ದ ರೈತ ಮತ್ತು ಜನಪರ ಯೋಜನೆಗಳನ್ನು ರದ್ದುಗೊಳಿಸಿರುವುದು ತೀವ್ರ ಖಂಡನೀಯ. ತಣ ಸರ್ಕಾರ ಜನಪರ ಮತ್ತು ರೈತಪರ ಯೋಜನೆ ಜಾರಿಗೆ ತರಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮೋರ್ಚಾ ಚಿಕ್ಕೋಡಿ ಜಿಲ್ಲಾಧ್ಯ ಸತ್ಯಪ್ಪ ನಾಯಿಕ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆ ಜಾರಿ ನೆಪದಲ್ಲಿ ಜನಪರ ಆಡಳಿತ ಮರೆತಿದೆ. ಹುಕ್ಕೇರಿ ತಾಲೂಕಿನ ರೈತರು ಮಳೆ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳೆ ಹಾನಿ ಸಮೀೆ ನಡೆಸಿ ಪರಿಹಾರಧನ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ವಹಿಸಬೇಕು. ತಾಲೂಕನ್ನು ಬರಪೀಡಿತ ಪ್ರದೇಶವೆಂದು ೂಷಿಸಬೇಕೆಂದು ಆಗ್ರಹಿಸಿದರು.

ಮಂಡಲ ಅಧ್ಯ ರವೀಂದ್ರ ಹಿಡಕಲ್​, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯ ಡಾ.ರಾಜೇಶ ನೇರ್ಲಿ, ಮಂಡಲ ಅಧ್ಯ ರಾಚಯ್ಯ ಹಿರೇಮಠ, ಕಲಗೌಡ ಪಾಟೀಲ, ಗುರುರಾಜ ಕುಲಕರ್ಣಿ, ದುಂಡಪ್ಪ ಬೆಂಡವಾಡಿ, ಮಹಾವೀರ ನಾಶಿಪುಡಿ, ಶಿವನಗೌಡ ಪಾಟೀಲ, ಶೀತಲ ಬ್ಯಾಳಿ, ಆನಂದ ಲಕ್ಕುಂಡಿ, ಸಿದ್ದಪ್ಪ ತವಗ, ದುರದುಂಡಿ ಪಾಟಿಲ, ಗಿರೀಶ ಕುಲಕರ್ಣಿ, ಎಸ್​.ಎಸ್​.ಮದವಾಲ, ಸಂಜು ಬಸ್ತವಾಡ, ಅಪ್ಪಣ್ಣ ಖಾತೇದಾರ, ಸವಿತಾ ಏಣಗಿಮಠ, ಶಾಂತಾ
ಸೊಲ್ಲಾಪೂರೆ, ಸಂಗೀತಾ ಮಾಣಗಾಂವಿ, ಶರ್ಮಿಳಾ ಬಡಮಲ್ಲನವರ, ಬಾಳಾಸಾಹೇಬ ನಾಯಿಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net