

ಕಲಬುರಗಿ: ನಗರದ ಹಾಗರಗಾ ಕ್ರಾಸ್ ಹತ್ತಿರದ ಅಲ್ ಸಬಾ ಅರೆಬಿಯನ್ ಮಂಡಿ ಎಂಬ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಹುಕ್ಕಾ ಬಾರ್‌ನಲ್ಲಿ ಅಪ್ರಾಪ್ತರಿಗೆ ಹುಕ್ಕಾ ಸೇದಲು ಅವಕಾಶ ನೀಡುತ್ತಿದ್ದ ಹಿನ್ನೆಲೆಯಲ್ಲಿ ಸಬ್ ಅರ್ಬನ್ ಪೊಲೀಸ್ ಠಾಣೆ ಪೊಲೀಸರು ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ. ಹುಕ್ಕಾ ಬಾರ್ ನಡೆಸುತ್ತಿದ್ದ ಇಬ್ಬರು ಆರೋಪಿಗಳಾದ ಮಹ್ಮದ್ ಸುಲೇಮಾನ್ (೨೨), ಸೈಯದ್ ಹುಪ್ಲೇಕರ್ (೨೩) ಅವರನ್ನು ಬಂಧಿಸಿದ್ದು, ಮಾಲಿಕ ಅಬ್ದುಲ್ ಖಯೀಮ್ ಪಟೇಲ್ ವಿರುದ್ಧ ದೂರು ದಾಖಲಿಸಲಾಗಿದೆ. ಗ್ರಾಹಕರಾಗಿದ್ದ ಶೇಖ್ (೨೧), ಸೈಯದ್ (೨೧), ಮಹ್ಮದ್ (೨೧) ಅವರನ್ನು ವಿಚಾರಣೆ ನಡೆಸಿ, ಆಧಾರ ಕಾರ್ಡ್ ಸಂಗ್ರಹಿಸಲಾಗಿದೆ. ದಾಳಿಯಲ್ಲಿ ಮೂರು ಸಾವಿರ ರೂ. ಮೌಲ್ಯದ ಆರು ಹುಕ್ಕಾಗಳು, ಮೂರು ಬ್ರಿಕ್ ಕೋಲ್‌ಗಳ ಡಬ್ಬಿ, ವಿವಿಧ ಕಂಪನಿಯ ಫ್ಲೆವರ್‌ಗಳುಳ್ಳ ನಾಲ್ಕು ಡೆಬ್ಬಿ, ಎಲೆಕ್ಟಿçಕ್ ಹೀಟರ್, ಚಿಮಟಾ, ಚಾಕುಗಳು ಸೇರಿ ಹುಕ್ಕಾ ಬಾರ್ ನಡೆಸುವ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.