ಹುಂಡಿಯಲ್ಲಿ 73.38 ಲಕ್ಷ ರೂ. ಸಂಗ್ರಹ

16-6
ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿನ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ.
Published on

ಸವದತ್ತಿ, ಬೆಳಗಾವಿ: ಎರಡು ದಿನಗಳಿಂದ ನಡೆದ ಯಲ್ಲಮ್ಮ ದೇವಸ್ಥಾನದಲ್ಲಿನ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ಬುಧವಾರ 36.87 ಲಕ್ಷ ರೂ. ನಗದು, 30 ಸಾವಿರ ರೂ. ಮೌಲ್ಯದ 6 ಗ್ರಾಂ ಚಿನ್ನ, 11.2 ಸಾವಿರ ರೂ. ಮೌಲ್ಯದ 183 ಗ್ರಾಂ ಬೆಳ್ಳಿ ಆಭರಣ ಸೇರಿದೆ. ಗುರುವಾರ 36.50 ಲಕ್ಷ ರೂ. ನಗದು, 4.57 ಲಕ್ಷ ರೂ. ಮೌಲ್ಯದ 88 ಗ್ರಾಂ ಚಿನ್ನ ಮತ್ತು 83.8 ಸಾವಿರ ರೂ. ಮೌಲ್ಯದ 1.37 ಕಿ.ಗ್ರಾಂ ಬೆಳ್ಳಿ ಆಭರಣ ಸಂಗ್ರಹಗೊಂಡಿದೆ.

ಒಟ್ಟು 73.38 ಲಕ್ಷ ರೂ. ನಗದು, 4.88 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 95 ಸಾವಿರ ರೂ. ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾದಂತಾಗಿದೆ. ಜತೆಗೆ ಅಮೆರಿಕನ್ ಡಾಲರ್, ರಿಯಾಲ್, ಆಸ್ಟ್ರೇಲಿಯನ್ ಡಾಲರ್ ಸೇರಿ ಹಲವು ದೇಶದ ಕರೆನ್ಸಿಗಳು ಹುಂಡಿಯಲ್ಲಿ ಕಂಡುಬಂದಿವೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಾಳಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net