ಹುಂಡಿಯಲ್ಲಿ 2.21 ಲಕ್ಷ ರೂ. ಸಂಗ್ರಹ

07-kkr2
Published on

ಕಿಕ್ಕೇರಿ: ಹೋಬಳಿಯ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಸಾಸಲು ಕ್ಷೇತ್ರದ ಸೋಮೇಶ್ವರ, ಶಂಭುಲಿಂಗೇಶ್ವರ ದೇವಾಲಯದ ಹುಂಡಿಯಲ್ಲಿ ಈ ಬಾರಿ 2,21,240 ರೂ. ಸಂಗ್ರಹವಾಗಿದೆ.


ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲದ ಹುಂಡಿ ಎಣಿಕೆ ತಹಸೀಲ್ದಾರ್ ಎಂ.ವಿ.ರೂಪಾ ಮಾರ್ಗದರ್ಶನದಲ್ಲಿ ನಡೆಯಿತು. ಮೂರು ತಿಂಗಳಿಗೊಮ್ಮೆ ಹುಂಡಿ ಎಣಿಕೆ ನಡೆಯಲಿದ್ದು, ಕಾರ್ತಿಕ ಮಾಸದ ಜಾತ್ರೆಗೆ ಮುನ್ನ ದೇಗುಲದಲ್ಲಿರುವ ಒಟ್ಟು 8 ಹುಂಡಿಗಳ ಎಣಿಕೆ ಕಾರ್ಯ ಮಾಡಲಾಗಿದೆ. ಅ. 24ರಿಂದ ಕಾರ್ತಿಕ ಮಾಸದ ಜಾತ್ರೆ ಆರಂಭವಾಗಲಿದ್ದು, ದೇಗುಲಕ್ಕೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು ಕಳವು ಪ್ರಕರಣ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.


ಕಾಣಿಕೆ ಹಣವನ್ನು ಗ್ರಾಮದ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಅಕೌಂಟ್‌ಗೆ ಜಮಾ ಮಾಡಲಾಯಿತು. ಬರೋಡಾ ಬ್ಯಾಂಕ್ ಸಿಬ್ಬಂದಿ ಪ್ರಕಾಶ್, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಮ ಲೆಕ್ಕಿಗರಾದ ಪ್ರಸನ್ನ, ತಿಪ್ಪೇಶ್, ಸುನೀಲ್, ಕಾಂತೇಶ್, ಶಶಿಕುಮಾರ್ ಮಡ್ಡಿ, ಪರಿಮಳಾ, ಪೂರ್ಣಿಮಾ, ಗ್ರಾಮ ಸಹಾಯಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net