

ಕೊಳ್ಳೇಗಾಲ: ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳ ಹುಂಡಿ ಎಣಿಕೆ ಗುರುವಾರ ನಡೆದಿದ್ದು 18,78,400 ರೂ. ಸಂಗ್ರಹವಾಗಿದೆ.
ಕೊಳ್ಳೇಗಾಲ ಉಪವಿಭಾಗಾಧಿಕಾರಿ ಬಿ.ಆರ್.ಮಹೇಶ್ ಮಾರ್ಗದರ್ಶನದಲ್ಲಿ 6 ತಿಂಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಶಿವನಸಮುದ್ರದ ಸಮೂಹ ದೇವಾಲಯಗಳಾದ ಶ್ರೀ ಮಧ್ಯ ರಂಗನಾಥಸ್ವಾಮಿ, ಸೋಮೇಶ್ವರಸ್ವಾಮಿ ಹಾಗೂ ಆದಿಶಕ್ತಿ ಶಿಂಷಾ ಮಾರಮ್ಮ ದೇವಾಲಯಗಳ ಹುಂಡಿಗಳ ಎಣಿಕೆ ನಡೆಸಿದ್ದು 18,78,400 ರೂ. ದೊರೆತಿದೆ. ಜತೆಗೆ 5 ಗ್ರಾಂ ಚಿನ್ನ, 13 ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿವೆ.
ಶಿವನಸಮುದ್ರದ ಸಮೂಹ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಎನ್.ಸುರೇಶ್, ಉಪ ತಹಸೀಲ್ದಾರ್ ವಿಜಯಕುಮಾರ್, ಕಸಬಾ ಹೋಬಳಿ ಆರ್‌ಐ ನಿರಂಜನ್, ಪಾಳ್ಯ ಹೋಬಳಿ ಆರ್‌ಐ ರಂಗಸ್ವಾಮಿ, ಗ್ರಾಮಲೆಕ್ಕಿಗರಾದ ಪ್ರದೀಪ್, ಅನಿಲ್, ರಾಕೇಶ್, ಪ್ರಸಾದ್, ಶಿವರಾಜು, ಮಹದೇವಸ್ವಾಮಿ, ದೇವಾಲಯ ಸಿಬ್ಬಂದಿ, ಕೊಟಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್, ಸಿಬ್ಬಂದಿ ಇದ್ದರು.