ಹುಂಡಿಯಲ್ಲಿ 10 ಲಕ್ಷ ರೂ. ಸಂಗ್ರಹ

19kgl3..
ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರದ ಸಮೂಹ ದೇವಾಲಯದ ಹುಂಡಿ ಎಣಿಕೆ ಮಾಡುತ್ತಿರುವ ವಿವಿಧ ಇಲಾಖೆ ಅಧಿಕಾರಿಗಳು. ಉಪ ತಹಸಿಲ್ದಾರ್ ವಿಜಯ್ ಕುಮಾರ್, ಆರ್‌ಐ ರಂಗಸ್ವಾಮಿ, ದೇವಾಲಯಗಳ ಇಒ ಸುರೇಶ್ ಮತ್ತಿತರರಿದ್ದರು.
Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಗಳಾದ ಆದಿಶಕ್ತಿ ಮಾರಮ್ಮ, ಪ್ರಸನ್ನ ಮೀನಾಕ್ಷಿ, ಮಧ್ಯ ರಂಗನಾಥಸ್ವಾಮಿ ಸನ್ನಿಧಿಗಳ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, 10,13,620 ರೂ. ಸಂಗ್ರಹವಾಗಿದೆ.

ಉಪವಿಭಾಗಾಧಿಕಾರಿ ಗೀತಾ ಹುಡೇದ ನಿರ್ದೇಶನದಂತೆ ಹುಂಡಿ ಎಣಿಕೆ ನಡೆದಿದ್ದು, ಮೂರು ದೇವಾಲಯಗಳಲ್ಲಿ 3 ತಿಂಗಳ ಅವಧಿಯಲ್ಲಿ ನಗದು ಹಣದೊಂದಿಗೆ 2.5 ಗ್ರಾಂ ಚಿನ್ನ, 23 ಗ್ರಾಂ ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ್ದಾರೆ. ಉಪತಹಸಿಲ್ದಾರ್ ವಿಜಯ್‌ಕುಮಾರ್, ಆರ್‌ಐ ರಂಗಸ್ವಾಮಿ, ನಿರಂಜನ್, ದೇವಾಲಯಗಳ ಇಒ ಸುರೇಶ್ ಮತ್ತಿತರರಿದ್ದರು.

ಓದುವ ಜ್ಞಾನ ಕೊಡು: ಹುಂಡಿ ಎಣಿಕೆ ವೇಳೆ ಭಕ್ತರು ದೇವರಿಗೆ ಬರೆದ ಎರಡು ವಿಶೇಷ ಕೋರಿಕೆ ಪತ್ರಗಳು ಗಮನ ಸೆಳೆದಿವು. ಒಂದು ಪತ್ರದಲ್ಲಿ ‘ಕಾಲೇಜಿನಲ್ಲಿ ಯಾರೂ ನನ್ನ ತಂಟೆಗೆ ಬರಬಾರದು. ಓದುವ ಜ್ಞಾನ ಕೊಡು ತಾಯಿ. ಹೆಚ್ಚು ಅಂಕದೊಂದಿಗೆ ಪಾಸ್ ಮಾಡಿಸು’ ಎಂದು ವಿದ್ಯಾರ್ಥಿಯೊಬ್ಬ ಆದಿಶಕ್ತಿ ಮಾರಮ್ಮನಿಗೆ ಕೋರಿದ್ದಾನೆ.
ಮತ್ತೊಂದು ಪತ್ರದಲ್ಲಿ ಯುವತಿಯೊಬ್ಬಳು ‘ಇಚ್ಛೆಪಟ್ಟ ಹುಡುಗನೊಂದಿಗೆ ಮದುವೆ ಮಾಡಿಸು. ನಾನು ಸೇರುವ ಮನೆಗೆ ಒಳ್ಳೆಯದಾಗಲಿ. ಅವರ ಮನೆಯ ಸಾಲವೆಲ್ಲವೂ ತೀರಲಿ’ ಎಂದು ಬರೆದು ದೇವರಿಗೆ ಅರ್ಪಿಸಿದ್ದಾಳೆ.ಕೊಳ್ಳೇಗಾಲ ತಾಲೂಕಿನ ಶಿವನ ಸಮುದ್ರದ ಸಮೂಹ ದೇವಾಲಯದ ಹುಂಡಿ ಎಣಿಕೆ ಮಾಡುತ್ತಿರುವ ವಿವಿಧ ಇಲಾಖೆ ಅಧಿಕಾರಿಗಳು. ಉಪ ತಹಸಿಲ್ದಾರ್ ವಿಜಯ್ ಕುಮಾರ್, ಆರ್‌ಐ ರಂಗಸ್ವಾಮಿ, ದೇವಾಲಯಗಳ ಇಒ ಸುರೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net