

ಮೈಸೂರು: ಮೈಸೂರು ತಾಲೂಕಿನ ಬೊಮ್ಮನಹಳ್ಳಿಯ ಮಹದೇಶ್ವರಸ್ವಾಮಿ ದೇವಾಲಯದ ಬಾಗಿಲು ಮೀಟಿ ಕಾಣಿಕೆ ಹುಂಡಿಯ ಹಣವನ್ನು ಕಳ್ಳತನ ಮಾಡಲಾಗಿದೆ.
ರಾತ್ರಿ 8 ಗಂಟೆ ಸಮಯದಲ್ಲಿ ಅರ್ಚಕರು, ದೇವಸ್ಥಾನದ ಬೀಗವನ್ನು ಹಾಕಿಕೊಂಡು ಹೋಗಿದ್ದು, ಮರುದಿನ ಬೆಳಗ್ಗೆ ವಾಪಸ್ ಬಂದು ನೋಡಿದಾಗ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ.
ದೇವಸ್ಥಾನದ ಬಾಗಿಲು ಮೀಟಿ ಒಳಗೆ ನುಗ್ಗಿರುವ ಕಳ್ಳರು, ಗೋಲಕವನ್ನು ಹೊರಗೆ ತಂದು ಒಡೆದು ಹಣವನ್ನು ಕಳವು ಮಾಡಿದ್ದಾರೆ. ಇಲವಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.