

ಚಿತ್ರದುರ್ಗ: ಜಿಲ್ಲೆಯಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು,ಹವಾಮಾನ ಇಲಾಖೆ ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಿಲ್ಲೆಗೆ ಬಿಸಿಗಾಳಿ ಎಚ್ಚರಿಕೆ ನೀಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಟಕೇಶ್ ತಿಳಿಸಿದ್ದಾರೆ. ಈ ಹಿನ್ನೆಲೆ ಜನರ ಆರೋಗ್ಯದ ಮೇಲೆ ದುಷ್ಟ್ಪರಿಣಾಮ ಬೀ ರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮನ್ನೆಚ್ಚರಿಕೆ ಕ್ರಮಗಳನ್ನು ಬಿಡುಗಡೆ ಮಾಡಿದೆ.
ಹೀಟ್‌ವೇವ್‌ನೆಡೆ ಸದಾ ಎಚ್ಚರಿಕೆ ಅಗತ್ಯ,ಬಾಯಾರಿಕೆಯಿಲ್ಲದಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು. ಹಗುರ,ತಿಳಿ, ಬ ಣ್ಣದ,ಸಡಿಲ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳು,ರಕ್ಷಣಾತ್ಮಕ ಕನ್ನಡಕಗಳು,ಛತ್ರಿ,ಟೋಪಿ,ಬೂಟು ಅಥವಾ ಚಪ್ಪಲಿ ಧರಿಸಿಬೇಕು. ರಾತ್ರಿ ವೇ ಳೆ ದೂರದ ಪ್ರಯಾಣ ಉತ್ತಮ. ಹಗಲು ಪ್ರಯಾಣ ಸಂದರ್ಭ ಬಂದರೆ ಕುಡಿವ ಇರಬೇಕು.
ಬಿಸಿಲಿನಲ್ಲಿ ಕೆಲಸ ಮಾಡುವವರು,ಟೋಪಿ ಧರಿಸಬೇಕು. ತಲೆ,ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸ ಬೇಕು. ದೇಹ ತಂಪಾಗಿಡಲು ಮನೆಯಲ್ಲಿ ತಯಾರಿಸಿದ ಲಸ್ಸಿ, ಶರಬತ್ ಮಜ್ಜಿಗೆ ಇತ್ಯಾದಿ ಸೇವಿಸಬೇಕು. ಸಾಕು ಪ್ರಾಣಿ,ಪಕ್ಷಿಗಳು, ನೆರಳು ನೀರು ಒದಗಿಸಬೇಕು.
ಫ್ಯಾನ್‌ಗಳನ್ನು ಬಳಸುವುದರೊಂದಿಗೆ ತಣ್ಣೀರು ಸ್ನಾನ ಉತ್ತಮ. ತಂಪಾದ ಸಮಯ ಹಾಗೂ ಸ್ಥಳದಲ್ಲಿ ಕೆಲಸ ನಿರ್ವಹಿಸಬೇಕು. ಕೆಲಸ ನಿರ್ವಹಿಸುವ ಗರ್ಭಿಣಿಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರಿಗೆ ಆರೋಗ್ಯದೆಡೆ ಹೆಚ್ಚಿನ ಗಮನಹರಿಸಬೇಕು. ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡ ಬಾರದು. ಕಪ್ಪು ಅಥವಾ ಬಿಗಿ ಬಟ್ಟೆಗಳನ್ನು ಧರಿಸಬಾರದು.
ಮಧ್ಯಾಹ್ನ 12ರಿಂದ 3ರವರೆಗೆ ಹೊರಗೆ ಕೆಲಸ ಹಾಗೂ ಶ್ರಮದಾಯಕ ಚಟುವಟಿಕೆಗಳು ಬೇಡ. ಬಿಸಿಲಿನ ಸಮಯದಲ್ಲಿ ಅಡುಗೆ ಮಾಡಬಾರದು. ಅಡುಗೆ ಸ್ಥಳದಲ್ಲಿ ಸಮರ್ಪಕವಾಗಿ ಗಾಳಿಯಾಡುವಂತಿರಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋ ಹಾಲ್,ಚಹಾ,ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯಗಳ ಸೇವನೆ ಬೇಡ. ಚಪ್ಪಲಿ ಧರಿಸದೆ ಹೊರ ಹೋಗಬಾರದು ಎಂದು ಡಿಸಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
---