

ಎನ್.ಆರ್.ಪುರ: ಪಟ್ಟಣದ ಹಳೇಮಂಡಗದ್ದೆ ರಸ್ತೆಯ ಹಿಳುವಳ್ಳಿ ಯುವಕ ಸಂಘದವರು ಪ್ರತಿಷ್ಠಾಪಿಸಿರುವ ಗಣೇಶನ ಸನ್ನಿಧಿಯಲ್ಲಿ ಭಾನುವಾರ ಸಾಮೂಹಿಕ ಸತ್ಯನಾರಾಯಣ ಪೂಜೆ ಜರುಗಿತು.
ಸತ್ಯನಾರಾಯಣ ವ್ರತ ಪಾರಾಯಣ ನಡೆಯಿತು. ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಎ.ಆರ್.ಕುಮಾರ, ಪದಾಧಿಕಾರಿಗಳಾದ ಮಧು, ವಿ.ಜಿ.ಪಾಪಣ್ಣ, ಪ್ರಸನ್ನ, ಅಭಿ, ಮಂಜು, ಅರವಿಂದ ಪಾಣಿ, ಕೊಲ್ಲೇಶ್ವರ ಯಾದವ್, ಕೃಷ್ಣ, ಶ್ರೀಕಾಂತ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.
ವಿಸರ್ಜನೆ: ಎನ್.ಆರ್.ಪುರ ಡಿಪೋ ರಸ್ತೆಯಲ್ಲಿರುವ ರಾಜೀವ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ಸಮಿತಿ ಅಧ್ಯಕ್ಷೆ ಜುಬೇದಾ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಜಲಸ್ತಂಭನಗೊಳಿಸಲಾಯಿತು. ಮೆರವಣಿಗೆಯಲ್ಲಿ ರಾಜೀವ ನಗರದ ಭಕ್ತರು ಪಾಲ್ಗೊಂಡಿದ್ದರು.