ಹಿರೇಹಾಳದಲ್ಲಿ 24 ಯೂನಿಟ್ ರಕ್ತ ಸಂಗ್ರಹ

25 RON 1
Published on

ರೋಣ: ತಾಲೂಕಿನ ಹಿರೇಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ 24 ಯೂನಿಟ್ ರಕ್ತ ಸಂಗ್ರಹವಾಗಿದೆ.

ಗದಗ ಸರ್ಕಾರಿ ರಕ್ತ ಭಂಡಾರ ಜಿಮ್್ಸ ಆಸ್ಪತ್ರೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಶ್ರೀ ವೀರಪುಲಿಕೇಶಿ ಗ್ರಾಮೀಣ ಆಯುರ್ವೆದ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬಾದಾಮಿ ಹಾಗೂ ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಹುಬ್ಬಳ್ಳಿ ಆಶ್ರಯದಲ್ಲಿ ಏರ್ಪಡಿಸಿದ್ದ ಶಿಬಿರದಲ್ಲಿ 26 ಜನ ರಕ್ತದಾನ ಮಾಡಿದರು. ದಾನಿಗಳಿಗೆ ರಕ್ತ ನಿಧಿ ಕೇಂದ್ರದಿಂದ ಪ್ರಮಾಣ ಪತ್ರ ನೀಡಲಾಯಿತು.

ವೀ.ಪು.ಗ್ರಾ. ಆಯುರ್ವೆದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಸವರಾಜ ಮುಲ್ಕಿಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಸಂಘ- ಸಂಸ್ಥೆಗಳು, ಸಾರ್ವಜನಿಕರು ಜಾತ್ರಾ ಮಹೋತ್ಸವ, ಪುಣ್ಯ ಪುರುಷರ ಜಯಂತಿ ಹಾಗೂ ವಿಶೇಷ ದಿನಗಳಂದು ರಕ್ತದಾನ ಶಿಬಿರ ಆಯೋಜಿಸಿ ಸಂಕಷ್ಟದಲ್ಲಿರುವ ಬಡ ರೋಗಿಗಳಿಗೆ ನೆರವಾಗಬೇಕು ಎಂದರು.

ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ಡಾ. ಎಂ.ಡಿ. ಸಾಮುದ್ರಿ ಮಾತನಾಡಿ, ‘ಕೋವಿಡ್ ಸಂದರ್ಭದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಿದ್ದೇವೆ. ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಬಡ ಜನತೆಗೆ ಆಹಾರದ ಕಿಟ್​ಗಳನ್ನು ವಿತರಿಸಲಾಗಿದೆ’ ಎಂದರು. ತಾಪಂ ಉಪಾಧ್ಯಕ್ಷೆ ಇಂದ್ರಾ ತೇಲಿ, ಡಾ. ಶ್ವೇತಾ ಪಾಟೀಲ, ಡಾ. ಪ್ರಫುಲ್​ಕುಮಾರ, ಎಸ್.ಬಿ. ಪಾಟೀಲ, ಗ್ರಾ.ಪಂ. ಮಾಜಿ ಸದಸ್ಯ ನೀಲಪ್ಪ ತಲಬಟ್ಟಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net