

ಹೂವಿನಹಡಗಲಿ: ಹಿರೇಮಲ್ಲನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸುಮಿತ್ರಾಬಾಯಿ ಚಂದ್ರನಾಯ್ಕ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿಯ 17 ಸದಸ್ಯರ ಪೈಕಿ 6 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಗೈರಾಗಿದ್ದರು. ತಹಸೀಲ್ದಾರ್ ಜಿ.ಸಂತೋಷ್ ಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಹನುಮಂತಪ್ಪ, ಉಪಾಧ್ಯಕ್ಷ ಡಂಬಳ ನಾಗರಾಜ, ಪ್ರಮುಖರಾದ ಎಸ್.ದೂದನಾಯ್ಕ, ಅಶೋಕ ಟೆಂಗೂರಿ, ಚಂದ್ರಶೇಖರ, ಭರಮಲಿಂಗಪ್ಪ ಇತರರಿದ್ದರು.