ಹಿರೇಮಠ ಬಸವಲಿಂಗೇಶ್ವರ ಶ್ರೀಗಳಿಂದ ಸಾಮಾಜಿಕ ಕಾರ್ಯ: ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಅಭಿಮತ

27012023 yelburga book release
Published on


ಯಲಬುರ್ಗಾ: ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಶ್ರೀಧರ ಮುರಡಿ ಹಿರೇಮಠ ಉತ್ತಮ ಕೆಲಸ ಮಾಡುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶ್ರೀಗಳ 21ನೇ ವರ್ಷದ ಪೀಠಾರೋಹಣ ಹಾಗೂ ಹಿರೇಮಠದ ಕುರಿತು ‘ಕರ್ಮಯೋಗಿ’ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಮಠದ ಪರಂಪರೆಯನ್ನು ಬಸವಲಿಂಗೇಶ್ವರ ಶ್ರೀಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹಿಂದಿನ ಶ್ರೀಗಳಂತೆ ಮಕ್ಕಳಿಗೆ ಅಕ್ಷರ, ದಾಸೋಹ ಸೇರಿ ಹಲವು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಮಠ ಧಾರ್ಮಿಕ, ಶೈಕ್ಷಣಿಕ ಹಾಗೂ ಇತರ ಕ್ಷೇತ್ರದಲ್ಲಿ ದಾಪುಗಾಲು ಇಡುತ್ತಿದೆ. ಮಠದ ಪರಂಪರೆ ಕುರಿತು ಸುನೀತಾ ಮಂಜುನಾಥ ಪತಂಗರಾಯ ರಚಿಸಿದ ‘ಕರ್ಮಯೋಗಿ’ ಗ್ರಂಥ ಸ್ಫೂರ್ತಿದಾಯಕವಾಗಿದೆ ಎಂದರು.

ಹಿರೇಹಡಗಲಿಯ ಅಭಿನವ ಶ್ರೀ ಹಾಲ ಸ್ವಾಮೀಜಿ ಮಾತನಾಡಿ, ಬಸವಲಿಂಗೇಶ್ವರ ಶ್ರೀಗಳು ಗೋಶಾಲೆ ತೆರೆದು ನೂರಾರು ಜಾನುವಾರುಗಳಿಗೆ ನೆರವಾಗಿದ್ದಾರೆ. ಗೋವುಗಳ ಸಂತತಿ ಉಳಿಸಿ ಬೆಳೆಸುವಂತ ಕಾರ್ಯವಾಗಬೇಕು ಎಂದರು. ಭಕ್ತರಿಂದ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿತು. ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಗುರುಶಾಂತವೀರ ಸ್ವಾಮೀಜಿ, ಗಣ್ಯರಾದ ರೇವಣಪ್ಪ ಹಿರೇಕುರುಬರ, ಹನುಮಂತ ಭಜಂತ್ರಿ, ಶಿವರಾಜ ಗುರಿಕಾರ, ಸುರೇಶಗೌಡ ಶಿವನಗೌಡ್ರ, ಬಸವರಾಜ ಕೊಂಡಗುರಿ, ನಾರಾಯಣಸಿಂಗ್ ಬಾಲಾಜಿ, ಗಂಗಮ್ಮ ಮುರಡಿ, ಗಂಗಮ್ಮ ಕಲ್ಲೂರ, ಈಶಪ್ಪ ಸ್ಟಾಂಪಿನ, ಮಲ್ಲಪ್ಪ ಭೂತೆ, ವೀರೇಶ ಸ್ಟಾಂಪಿನ, ಬಸವರಾಜ ಸಾದರಖಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net