ಹಿರೇಬೂದೂರು ಮಾರ್ಗದಲ್ಲಿ ಬಸ್ ಸಂಚಾರ: ಐದಾರು ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲ

Untitled design (2)
ದೇವದರ್ಗದಿಂದ ಸುಂಕೇಶ್ವರಹಾಳ ಮಾರ್ಗದ ಮೂಲಕ ಹಿರೇಬೂದೂರುಗೆ ಹೊಸ ಬಸ್ ಆರಂಭಿಸಿದ್ದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಬಸ್‌ಗೆ ಪೂಜೆ ಸಲ್ಲಿಸಿ ಚಾಲಕ, ನಿರ್ವಾಹಕರನ್ನು ಸ್ವಾಗತಿಸಿದರು. ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ, ಸದಸ್ಯರಾದ ಶರಣಗೌಡ, ಮಹೇಶ, ದೊಡ್ಡ ಶರಣಪ್ಪಗೌಡ ಹದ್ದಿನಾಳ, ದುರುಗಪ್ಪ ನಾಯಕ, ಹುಸೇನ್ ಸಾಬ್, ಮಹೇಶ ಇದ್ದರು.
Published on

ದೇವದುರ್ಗ: ತಾಲೂಕು ಕೇಂದ್ರದಿಂದ ಗೂಗಲ್‌ವರೆಗೆ ಐದಾರು ಹಳ್ಳಿಗಳ ಜನರು ಹಾಗೂ ವಿದ್ಯಾರ್ಥಿಗಳ ಸಂಚಾರಕ್ಕಾಗಿ ಶಾಸಕಿ ಕರೆಮ್ಮ ಜಿ. ನಾಯಕ ಸೂಚನೆ ಮೇರೆಗೆ ಸೋಮವಾರ ಹೊಸ ಬಸ್ ಸಂಚಾರ ಆರಂಭಿಸಲಾಯಿತು.


ದೇವದುರ್ಗದಿಂದ ಮಧ್ಯಾಹ್ನ 1 ಗಂಟೆಗೆ ಸುಂಕೇಶ್ವರಹಾಳ, ಹಿರೇಬೂದೂರು, ಮಸಿಹಾಳ, ಮಾತ್ಪಳ್ಳಿ, ಗೂಗಲ್‌ವರೆಗೆ ಬಸ್ ಸಂಚಾರಿಸಲಿದೆ. ಬಸ್‌ಗೆ ಗ್ರಾಮಸ್ಥರು ತಳಿರು ತೋರಣ ಕಟ್ಟಿ, ಪೂಜೆ ಸಲ್ಲಿಸಿ ಸ್ವಾಗತಿಸಿದರು. ಚಾಲಕ ಹಾಗೂ ನಿರ್ವಾಹಕ ಅವರನ್ನು ಸನ್ಮಾನಿಸಿದರು. ಐದಾರು ಹಳ್ಳಿಗಳ ಜನರು ಹಾಗೂ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ 30 ಕಿಮೀ ಖಾಸಗಿ ವಾಹನಗಳಲ್ಲಿ ಓಡಾಟ ನಡೆಸಬೇಕಿತ್ತು.


ಗೂಗಲ್, ಸುಂಕೇಶ್ವರಹಾಳ, ಹಿರೇಬೂದೂರು ಪ್ರೌಢಶಾಲೆಗೆ ಬರುವ ಮಸಿಹಾಳ, ಮಾತ್ಪಳ್ಳಿ, ಹದ್ದಿನಾಳ, ಬೂದಿನಾಳ, ಇಂಗಳದಾಳ ಗ್ರಾಮಗಳ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದರು. ಈ ಬಸ್ ಸಂಚಾರದಿಂದ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ, ಸದಸ್ಯರಾದ ಶರಣಗೌಡ, ಮಹೇಶ, ದೊಡ್ಡ ಶರಣಪ್ಪಗೌಡ ಹದ್ದಿನಾಳ, ದುರುಗಪ್ಪ ನಾಯಕ, ಹುಸೇನ್ ಸಾಬ್, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net