ಹಿರೇಗದ್ದೆಯಲ್ಲಿ ಆರೋಗ್ಯ ತಪಾಸಣೆ

jyp test
ಹಿರೇಗದ್ದೆ ಗ್ರಾಪಂನಲ್ಲಿ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಸುದೇವ್ ಉದ್ಘಾಟಿಸಿದರು. ಹಮೀದ್, ಅಮರ್ ಇತರರಿದ್ದರು.
Published on

ಜಯಪುರ: ಹಿರೇಗದ್ದೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಭಾನುವಾರ ನವಚೈತ್ರ ಉಚಿತ ಆರೋಗ್ಯ ಕಾಳಜಿ ಶಿಬಿರ ಆಯೋಜಿಸಲಾಗಿತ್ತು.

ಶಿಬಿರವನ್ನು ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಂ.ಸುದೇವ್ ಉದ್ಘಾಟಿಸಿದರು. ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದ ತಜ್ಞ ವೈದ್ಯರ ನೇತೃತ್ವದಲ್ಲಿ ಎಲುಬು ಮತ್ತು ಕೀಲು ತಪಾಸಣೆ, ರಕ್ತದಾನ ಶಿಬಿರ ನಡೆಯಿತು. ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎನ್‌ಸಿಡಿ ಘಟಕದ ಸಿಬ್ಬಂದಿ ಮಧುಮೇಹ ಮತ್ತು ರಕ್ತದೊತ್ತಡ ಪರಿಕ್ಷೆ ನಡೆಸಿದರು. ಮಣಿಪಾಲದ ಕೆಎಂಸಿ ಆಸ್ಪತ್ರೆ ನೇತ್ರ ತಜ್ಞ ವೈದ್ಯರ ತಂಡದಿಂದ ಉಚಿತ ನೇತ್ರ ತಪಾಸಣೆ ನಡೆಸಿತು. ನೂರಕ್ಕೂ ಹೆಚ್ಚು ಜನ ವಿವಿಧ ತಪಾಸಣೆ ಮಾಡಿಸಿಕೊಂಡರು. 21 ಮಂದಿ ರಕ್ತದಾನ ಮಾಡಿದರು. ಪೊರೆ ಚಿಕಿತ್ಸೆಗೆ ಆಯ್ಕೆಯಾದ ಹತ್ತು ಜನರಲ್ಲಿ ನಾಲ್ವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಉಚಿತ ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯಲಾಯಿತು. ಸ್ಥಳೀಯ ಆಟೋ ಚಾಲಕರು, ಮಾಲೀಕರು, ಗಣೇಶ ಸಮಿತಿ ಸದಸ್ಯರು, ಗ್ರಾಪಂ ಸಿಬ್ಬಂದಿ ಸ್ವಯಂ ಸೇವಕರಾಗಿ ಸಹಕರಿಸಿದರು. ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ಸಾಗರ್‌ದೀಪ್, ಸದಸ್ಯರಾದ ಸುರೇಶ್, ಸುಮಾ, ಅಪ್ಪು, ಜಯಾ, ಸುಪ್ರೀತಾ, ಪಿಡಿಒ ಸುಜಾತಾ, ನವಚೈತ್ರ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಹಮೀದ್, ಸಂಚಾಲಕ ಅಮರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net