ಹಿರೇಗದ್ದೆ ಪಿಎಸಿಎಸ್‌ಗೆ ರೂ. 15.78 ಲಕ್ಷ ಲಾಭ

bhr pacs s
ಬಾಳೆಹೊನ್ನೂರು ಸಮೀಪದ ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಗತಿಪರ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎನ್.ನಾರಾಯಣ, ಕೆ.ಎಸ್.ಸುಧಾಕರ್, ಶ್ವೇತಾ, ರವೀಂದ್ರ, ವಿಜಯಕುಮಾರ್, ಸಂತೋಷ್‌ಕುಮಾರ್ ಇತರರಿದ್ದರು.
Published on

ಬಾಳೆಹೊನ್ನೂರು: ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ 15.78 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಎನ್.ನಾರಾಯಣ ಗೌಡ ತಿಳಿಸಿದರು.

ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು. ಸಂಘ 49 ವರ್ಷಗಳನ್ನು ಪೂರೈಸಿದ್ದು ಸದಸ್ಯರ, ಷೇರುದಾರರ ಪರಿಶ್ರಮದಿಂದಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ. ಸಂಘದಲ್ಲಿ ರೈತರಿಗೆ ಅಗತ್ಯವುಳ್ಳ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದು, ಬೆಳೆ ಸಾಲ, ದಾಸ್ತಾನು ಸಾಲ, ಗೊಬ್ಬರ ಸಾಲಗಳನ್ನು ಕಾಲ ಕಾಲಕ್ಕೆ ಅಗತ್ಯವಾಗಿ ಪೂರೈಸಲಾಗುತ್ತಿದೆ ಎಂದರು.

ಇದಲ್ಲದೆ ವಾಹನ, ಗೃಹ ನಿರ್ಮಾಣ ಮುಂತಾದ ಸಾಲಗಳನ್ನೂ ನೀಡಲಾಗುತ್ತಿದ್ದು ಷೇರುದಾರರು, ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬೇಕು. ಸಂಘದ ಅಭಿವೃದ್ಧಿಗೆ ಷೇರುದಾರರು, ಗ್ರಾಹಕರು ಕೈಜೋಡಿಸಿದರೆ ಮಾತ್ರ ಅಭಿವೃದ್ಧಿಪಥದಲ್ಲಿ ಮುನ್ನಡೆಯಲು ಸಾಧ್ಯವಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ರೈತರಿಗೆ ಇನ್ನೂ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುವ ಯೋಜನೆಯೂ ನಮ್ಮ ಮುಂದಿದೆ ಎಂದರು. ಪ್ರಗತಿಪರ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್ ಹೂವಿನಹಕ್ಲು ಅವರನ್ನು ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಕೆ.ಎಸ್.ಸುಧಾಕರ್, ನಿರ್ದೇಶಕರಾದ ಎಚ್.ಎನ್.ಶ್ವೇತಾ, ಕೆ.ಸಿ.ರವೀಂದ್ರ, ಟಿ.ಎಚ್.ವಿಜಯಕುಮಾರ್, ಬಿ.ಡಿ.ವಿಕ್ರಮ್, ಕೆ.ಎಂ.ಪ್ರಭಾಕರ್, ಎಚ್.ಕೆ.ಪ್ರಶಾಂತ್, ಎಂ.ಆರ್.ರಾಜು ಪೂಜಾರಿ, ಕೆ.ಸಿ.ಗೀತಾ, ಗುರುವಪ್ಪ, ಕೆ.ಜಿ.ಪದ್ಮನಾಭ, ಸಿಇಒ ಜಿ.ಆರ್.ಸಂತೋಷ್‌ಕುಮಾರ್, ಸಿಬ್ಬಂದಿ ನಂದನ್, ಕೆ.ಎಸ್.ಆದರ್ಶ್, ಸದಾನಂದ, ಕೆ.ಆರ್.ಅರುಣ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net