ಹಿರೇಗದ್ದೆ ಪಿಎಸಿಎಸ್‌ಗೆ ನಾರಾಯಣಗೌಡ ಅಧ್ಯಕ್ಷ

bhr ellle
ಹಿರೇಗದ್ದೆ ಪಿಎಸಿಎಸ್ ಅಧ್ಯಕ್ಷ ಎಸ್.ಎನ್.ನಾರಾಯಣಗೌಡ, ಉಪಾಧ್ಯಕ್ಷ ಸುಧಾಕರ್ ಅವರನ್ನು ಸಿಇಒ ಸಂತೋಷ್‌ಕುಮಾರ್ ಮತ್ತು ಸಿಬ್ಬಂದಿ ಅಭಿನಂದಿಸಿದರು. ಎಂ.ಎಸ್.ಪ್ರವೀಣ್, ಅಶ್ವತ್ಥ್, ಸಂಜೀವ ಇತರರಿದ್ದರು.
Published on

ಬಾಳೆಹೊನ್ನೂರು: ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್.ಎನ್.ನಾರಾಯಣ ಗೌಡ, ಉಪಾಧ್ಯಕ್ಷರಾಗಿ ಸುಧಾಕರ್ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ಅಭಿನಂದನಾ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಂ.ಸುದೇವ್ ಮಾತನಾಡಿ, ಪಿಎಸಿಎಸ್ ನೂತನ ನಿರ್ದೇಶಕರು, ಆಡಳಿತ ಮಂಡಳಿ ರೈತರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಬೇಕು. ರೈತರಿಗೆ ಸಂಘದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ತಲುಪಿಸಬೇಕು ಎಂದರು.

ನೂತನ ಅಧ್ಯಕ್ಷ ಎಸ್.ಎನ್.ನಾರಾಯಣ ಗೌಡ ಮಾತನಾಡಿ, ನಿರ್ದೇಶಕರು ನನ್ನನ್ನು ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಮಾಡಿದ್ದು, ನಿರ್ದೇಶಕರು, ಷೇರುದಾರರ ಆಶಯಗಳಿಗೆ ಚ್ಯುತಿ ಬಾರದಂತೆ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ಹೇಳಿದರು.

ಅಭಿನಂದನಾ ಸಮಾರಂಭದಲ್ಲಿ ಪ್ರಮುಖರಾದ ಸುಭಾಷ್, ಎಂ.ಎಸ್.ಪ್ರವೀಣ್, ಸಾಗರ್ ದೀಪ್, ಎಂ.ಟಿ.ದಿಲೀಪ್, ಅಶ್ವತ್ಥ್, ರಂಗಪ್ಪ ಗೌಡ, ಸಂಜೀವ ಪೂಜಾರಿ, ಮಹೇಶ್ ಆಚಾರ್ಯ, ಜ್ಯೋತಿ, ರವೀಂದ್ರ, ವಿಕ್ರಂ, ರಾಜು ಪೂಜಾರಿ, ಗೀತಾ, ಶ್ವೇತಾ, ವಿಜಯಕುಮಾರ್, ಪ್ರಶಾಂತ್, ಗುರುವಪ್ಪ, ಸಂಘದ ಸಿಇಒ ಸಂತೋಷ್‌ಕುಮಾರ್ ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net