ಹಿರೇಗದ್ದೆ ಪಿಎಸಿಎಸ್ ಕಿಟಕಿ ಮುರಿದು ಕಳವು

16bhr 9 web
Published on

ಬಾಳೆಹೊನ್ನೂರು: ಹಿರೇಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಿಟಕಿ ಮುರಿದು ಒಳನುಗ್ಗಿದ್ದ ಇಬ್ಬರು ಖದೀಮರು 3.25 ಲಕ್ಷ ರೂ. ನಗದು ದೋಚಿದ್ದಾರೆ. ಕಳವಿನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ರಾತ್ರಿ 11.20ರ ವೇಳೆಗೆ ಇಬ್ಬರು ಮುಸುಕುಧಾರಿಗಳು ಕಚೇರಿ ಹಿಂಬದಿ ಕಿಟಕಿಯ ಸರಳುಗಳನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿ ಒಳನುಗ್ಗಿದ್ದಾರೆ. ಬಳಿಕ ವಿದ್ಯುತ್, ಯುಪಿಎಸ್ ಸಂಪರ್ಕ ಕಡಿತಗೊಳಿಸಿ ಲೆಕ್ಕಪತ್ರದ ಫೈಲ್​ಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಗದು ಕೌಂಟರ್​ನಲ್ಲಿದ್ದ 3.25 ಲಕ್ಷ ರೂ. ಕಳವು ಮಾಡಿದ್ದಾರೆ. ಪಿಎಸಿಎಸ್​ನ ಸ್ಟ್ರಾಂಗ್ ರೂಮ್ೆ ಯಾವುದೇ ಹಾನಿ ಮಾಡಿಲ್ಲ.

ಸಿಬ್ಬಂದಿ ಮಂಗಳವಾರ ಕಚೇರಿಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಹಿರೇಗದ್ದೆ ಪಿಎಸಿಎಸ್ ಸಿಇಒ ಸಂತೋಷ್​ಕುಮಾರ್ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎನ್.ಆರ್.ಪುರ ಸಿಪಿಐ ವಸಂತ ಶಂಕರ್ ಭಾಗವತ್, ಪಿಎಸ್​ಐ ಪಿ.ಡಿ.ನಿತ್ಯಾನಂದ ಗೌಡ ಸ್ಥಳ ಪರಿಶೀಲಿಸಿದ್ದು, ಬೆರಳಚ್ಚು ತಜ್ಞರು, ಶ್ವಾನದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net