ಹಿರೇಕುರಬರ ಗುರುಗಳ ಸೇವೆ ಅನುಪಮ

The service of the Gurus of Hirekurab is unparalleled
ದೇವರಹಿಪ್ಪರಗಿ ತಾಲೂಕಿನ ಗಂಗನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ವೈ.ಎಂ. ಹಿರೇಕುರಬರ ದಂಪತಿಯನ್ನು ಸನ್ಮಾನಿಸಲಾಯಿತು. ಬಸವಲಿಂಗ ಸ್ವಾಮೀಜಿ, ಎನ್.ಎಚ್.ನಾಗೂರ, ರವಿಕುಮಾರ ಚೌಹಾಣ, ದಯಾದಂನ ಮಾದರ, ಎಸ್.ವೈ. ಕರ್ಜಗಿ, ದಯಾನಂದ ದೊಡಮನಿ ಇತರರಿದ್ದರು.
Published on

ಹಿಟ್ನಳ್ಳಿ: ಗುರುವಿನ ಕೃಪೆಯಿಂದ ಶ್ರೇಷ್ಠ ಜ್ಞಾನ ಸಂಪಾದಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.

ದೇವರಹಿಪ್ಪರಗಿ ತಾಲೂಕಿನ ಗಂಗನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ನಿವೃತ್ತ ಮುಖ್ಯಗುರು ವೈ.ಎಂ. ಹಿರೇಕುರಬರ ಅವರ ಸನ್ಮಾನ ಸಮಾರಂಭ, ಶಾರದಾಂಬೆ ದೇವಸ್ಥಾನ ಹಾಗೂ ಡಿಜಿಟಲ್ ಕೊಠಡಿ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಶರೀರ ನಶ್ವರವಾಗಿದೆ. ಬದುಕು ಸುಂದರವಾಗಲು ನುಡಿದಂತೆ ನಡೆಯಬೇಕು. ಪರೋಪಕಾರ ಮಾಡುತ್ತ ಬದುಕುವುದೇ ನಿಜವಾದ ಧರ್ಮ ಎನಿಸಿದೆ. ಪ್ರಾಮಾಣಿಕತೆಯಿಂದ ನೂರಾರು ಜನರ ಬದುಕು ಹಸನಗೊಳಿಸುವುದೇ ನಿಜವಾದ ಬದುಕು ಎಂದರು.

ಡಿಡಿಪಿಐ ಎನ್.ಎಚ್. ನಾಗೂರ ಮಾತನಾಡಿ, ಜೀವನದಲ್ಲಿ ಉನ್ನತ ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಬೆಳೆಸಿಕೊಳ್ಳಬೇಕು. ಶಿಕ್ಷಣ ಕ್ಷೇತ್ರವನ್ನು ಪರಿಶುದ್ಧಗೊಳಿಸಿ ಅದರ ಶೇಷ್ಠತೆ ಹೆಚ್ಚಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಶಿಕ್ಷಣಪ್ರೇಮಿ ಸದಾಶಿವ ದುದ್ದಗಿ, ತಾಂಬಾ ಜಗದಂಬಾ ವಿದ್ಯಾವರ್ಧಕ ಸಂಘದ ಚೇರ್ಮನ್ ರವಿಕುಮಾರ ಚೌಹಾಣ, ದಯಾನಂದ ಮಾದರ, ಎಸ್.ವೈ. ಕರ್ಜಗಿ, ಸುರೇಶಗೌಡ ಪಾಟೀಲ ಸಾಸನೂರ, ದಯಾನಂದ ದೊಡಮನಿ, ಎ.ಎಚ್. ವಾಲೀಕಾರ, ಜಿ.ಎಸ್.ಬೇನೂರ, ಎಂ.ಜಿ. ಯಂಕಂಚಿ, ಶರಣು ನಾಯ್ಕೋಡಿ, ಕಸ್ತೂರಿ ಬಡದಾಳ, ಕಾವೇರಮ್ಮ ಚೌಹಾಣ, ಕೆ.ಎ. ಬಿರಾದಾರ, ಎಸ್.ಕೆ. ಕೋಲಾರ, ಎ.ಎಲ್. ನಿಂಬರಗಿಮಠ, ಜಯಶ್ರೀ ಕೋಟಗೊಂಡ, ಶಾಲೆ ಸಿಬ್ಬಂದಿ ಇದ್ದರು. ಪಿ.ಸಿ. ಬಿರಾದಾರ ನಿರೂಪಿಸಿದರು. ಶ್ರೀಶೈಲ ಕುದರಿ ವಂದಿಸಿದರು.

ಇದಕ್ಕೂ ಮೊದಲು ನಿವೃತ್ತಿ ಹೊಂದಿದ ಮುಖ್ಯಶಿಕ್ಷಕ ವೈ.ಎಂ. ಹಿರೇಕುರಬರ ಅವರನ್ನು ಅಲಂಕೃತ ರಥದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಶಾಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net