ಹಿರೀಸಾವೆಯಲ್ಲಿ ಕಸಾಪದಿಂದ ಚರ್ಚಾ ಸ್ಪರ್ಧೆ

ಹಿರೀಸಾವೆಯಲ್ಲಿ ಕಸಾಪದಿಂದ ಚರ್ಚಾ ಸ್ಪರ್ಧೆ
Published on


ಚನ್ನರಾಯಪಟ್ಟಣ: ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೋಬಳಿಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಚರ್ಚಾ ಸ್ಪರ್ಧೆಯಲ್ಲಿ 12 ಶಾಲೆಗಳಿಂದ 24 ವಿದ್ಯಾರ್ಥಿಗಳು ಭಾಗವಹಿಸಿದ್ದರು.


ವಿಧ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಮಾತೃ ಭಾಷಯಿಂದಲೆ ಸಾಧ್ಯ ಎಂಬ ವಿ?ಯದ ಬಗ್ಗೆ ಶಾರದಾ ಅನಿಕೇತನ ಶಾಲೆಯ ರೂಪಿತಾ ಪ್ರಥಮ, ಜಿಜಿಎಚ್‌ಎಸ್ ಶಾಲೆಯ ಬಾನುಪ್ರಿಯಾ ದ್ವಿತೀಯ ಹಾಗೂ ದಿಡಗ ಅರುಣೋದಯ ಶಾಲೆಯ ಹರ್ಷಿತಾ ತೃತೀಯ ಬಹುಮಾನ ಪಡೆದರು.


ವಿಷಯ ವಿರೋಧವಾಗಿ ಜಿಜಿಎಚ್‌ಎಸ್ ಶಾಲೆಯ ನಮ್ರತಾ ಪ್ರಥಮ, ಜಿಜಿಎಚ್‌ಎಸ್ ಶಾಲೆಯ ಆದರ್ಶ್ ದ್ವೀತಿಯ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಶತಿ ಶಾಲೆಯ ಚೈತನ್ಯ ತೃತೀಯ ಬಹುಮಾನ ಪಡೆದರು. ಈ ಸ್ಪರ್ಧೆಯೂ ಇಲ್ಲಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯಿತು.


ಚರ್ಚಾ ಸ್ಪರ್ಧೆಯನ್ನು ಕಸಾಪ ಹೋಬಳಿ ಘಟಕದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಚ್.ಪಿ.ಶಂಕರ್ ಉದ್ಘಾಟಿಸಿದರು. ಸಮಾರೊಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಪ್ರೊ. ತಮ್ಮಣ್ಣಗೌಡ ಮಾತನಾಡಿದರು.
ಕಸಾಪ ಹೋಬಳಿಯ ಘಟಕದ ಅಧ್ಯಕ್ಷ ಎಚ್.ಎ.ಪ್ರಮೋದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಪ್ರೊ.ನಿಂಬೆಹಳ್ಳಿ ಚಂದ್ರು, ವಕೀಲ ಮಾವಿನಕೆರೆ ಮಂಜೇಶ್, ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಹರೀಶ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು.


ಕಸಾಪ ವತಿಯಿಂದ ವೈದ್ಯಕೀಯ ಪ್ರವೇಶ ಪಡೆದ ವಿದ್ಯಾರ್ಥಿ ಎಂ.ಎಸ್.ದೀಪಕ್ ಆವರನ್ನು ಸನ್ಮಾನಿಸಲಾಯಿತು. 12 ಶಾಲೆಗಳ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಿತಾ ಬೋರೇಗೌಡ, ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಮ್ಮ, ಕಸಾಪ ಕಾರ್ಯದರ್ಶಿ ಜಿ.ವಿ.ಗೋವಿಂದರಾಜು, ಪ್ರಮುಖರಾದ ನರೇಂದ್ರ, ತೋಟಿ ಮಂಜು, ಭಾರತಿ ಪುರು?ೋತ್ತಮ, ವಿನೋದ ಮಂಜೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net