

ಚನ್ನರಾಯಪಟ್ಟಣ: ನಾಡು-ನುಡಿ ಹಾಗೂ ನೆಲ-ಜಲದ ವಿಚಾರ ಬಂದಾಗ ಆಟೋ ಭಾಂದವರೇ ಮೊದಲು ಸಂಘಟಿತರಾಗಿ ನಿಲ್ಲುವುದು ಭಾಷಾ ಪ್ರೇಮವನ್ನು ಬಿಂಬಿಸುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಚೌಡೇಶ್ವರಿ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ, ಕನ್ನಡ ಒಂದು ಭಾಷೆಯಷ್ಟೇ ಅಲ್ಲ ನಮ್ಮ ಉಸಿರು ಎಂದರು.
ಕಸಾಪ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಮಾತನಾಡಿ, ಇಲ್ಲಿಗೆ ಬರುವ ಎಲ್ಲ ಭಾ?ೆಯವರ ಸಂಪರ್ಕ ಆಟೋದವರಿಗೆ ಹೆಚ್ಚು ಇರುತ್ತದೆ. ನಮ್ಮ ಭಾ?ೆಯನ್ನು ಅವರಿಗೆ ಕಲಿಸುವ ಪ್ರಯತ್ನ ಮಾಡಬೇಕು ಎಂದರು.
ಹಾಸನ ಜಿಲ್ಲಾ ಆಸ್ಪತ್ರೆ ಹಾಗೂ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರದ ರಕ್ತನಿಧಿ ವಿಭಾಗದಿಂದ ಶಿಬಿರದಲ್ಲಿ 38 ಜನರಿಂದ ರಕ್ತ ಪಡೆಯಲಾಯಿತು. 95 ಕ್ಕೂ ಹೆಚ್ಚು ಮಂದಿ ಮಧುಮೇಹ ಹಾಗೂ ರಕ್ತದೊತ್ತಡ ಸೇರಿದಂತೆ ಹಲವು ಪರೀಕ್ಷೆಗೆ ಒಳಪಟ್ಟರು.
ಚೌಡೇಶ್ವರಿ ದೇವಸ್ಥಾನದಲ್ಲಿ ವಿಶೇ? ಪೂಜೆ ಮತ್ತು ಅನ್ನದಾನ ಕಾರ್ಯಕ್ರಮ ಜರುಗಿತು. ಕಾಂಗ್ರೆಸ್ ಮುಖಂಡ ಎಚ್.ಸಿ.ಲಲಿತ ರಾಘವ್, ಪ್ರಮುಖರಾದ ಮಹೇಶ್, ಬೋರೇಗೌಡ, ಮಾರುತಿ ಮಂಜುನಾಥ, ಆರ್.ಕೆ.ಮಂಜುನಾಥ್, ಮಂಜುನಾಥ್, ಮಂಜು ಗೋವಿಂದರಾಜ್, ನಾಗೇಶ್, ಸಂಘದ ಅಧ್ಯಕ್ಷ ಸಂದೀಪ್, ಕಾರ್ಯದರ್ಶಿ ಮದನ್, ಖಾಜಾಂಚಿ ಸಬ್ಬನಹಳ್ಳಿ ಶಂಕರ್ ಹಾಗೂ ಇತರರು ಇದ್ದರು.