

ಚಿತ್ರದುರ್ಗ:ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ವಿಚಾರಣಾಧೀನ ಕೈದಿಯಿಂದ ಹಿರಿಯೂರಿನ ಗಾರ್ಮೆಂಟ್ ವ್ಯಾಪಾರಿಯೊಬ್ಬರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು,ಈ ಸಂಬಂಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿರಿಯೂರಿನ ಪ್ರಧಾನ ರಸ್ತೆಯಲ್ಲಿರುವ ಸೂರ‌್ಯನಾರಾಯಣ ಅವರ ಮಾಲಿಕತ್ವದ ಪ್ರಶಾಂತ ನಿಲಯದ ಬಾಡಿಗೆ ಕಟ್ಟಡದಲ್ಲಿ ಅರ್ಜುಸಿಂಗ್ ಎಂಬುವರು ಪಾಯಲ್ ಗಾರ್ಮೆಂಟ್ಸ್ ನಡೆಸುತ್ತಿದ್ದು,ಅಂಗಡಿ ಖಾಲಿ ಮಾಡದಿದ್ದರೆ ಕೂತಿ ರುವ ಸ್ಥಳದಲ್ಲೇ ಶೂಟ್ ಮಾಡಿ ಸುತ್ತೇನೆ,ಪೆಟ್ರೋಲ್ ಬಾಂಬ್ ಹಾಕಿಸುತ್ತೇನೆ ಎಂದೆಲ್ಲ ಆರೋಪಿ ಸುಜಯ್‌ಭಾರ್ಗವ್ ಬೆದರಿಸಿದ್ದಾನೆ. ಕಳೆದ ಜನವ 20ರಿಂದ ಹಲವು ಬಾರಿ ವಾಟ್ಸ್‌ಆಫ್ ಕಾಲ್ ಮಾಡಿ ಅಂಗಡಿ ಖಾಲಿ ಮಾಡುವಂತೆ ಹೇಳುತ್ತಿದ್ದ.
ಈ ವಿಚಾರವನ್ನು ಕಟ್ಟಡದ ಮಾಲೀಕ ಸೂರ‌್ಯನಾರಾಯಣರಿಗೆ ತಿಳಿಸಿದಾಗ,ಕರೆ ಮಾಡಿರುವಾತ ನನ್ನ ಅಣ್ಣನ ಮಗ,ತುಮಕೂರಿನ ವ್ಯಕ್ತಿ ಯೊಬ್ಬರ ಕೊಲೆ ಆರೋ ಪದಲ್ಲಿ ಬೆಂಗಳೂರಿನ ಜೈಲಿನಲ್ಲಿದ್ದಾನೆ. ಪೋನ್ ಮಾಡಿದರೆ ಕರೆ ಸ್ವೀಕರಿಸದಂತೆ ಎಚ್ಚರಿಸಿದ್ದಾನೆ. ಏ.13ರಂದು ಹಲವು ವಾಯ್ಸಮೆಸೇಜ್ ಕಳಿಸಿ ಬೆದರಿಸಿದ್ದಾ ನೆಂದು ಅರ್ಜುನ್‌ಸಿಂಗ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರು ವ ಹಿರಿಯೂರು ನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
----