

ಹಾಸನ: ದುದ್ದ, ಶಾಂತಿಗ್ರಾಮ, ಗಂಡಸಿ ಹೋಬಳಿಗಳಲ್ಲಿ ಹಾಸನ ಹಿರಿಯೂರು ಕಾರಿಡರ್ ಯೋಜನೆ ಅಡಿ ಭೂಮಿ ಕಳದುಕೊಂಡಿರುವ ಸಂತಸ್ತ್ರ ರೈತರುಗಳ ಹೋರಾಟ ಸಮಿತಿಯಿಂದ ಪರ್ಯಾಯ ಭೂಮಿ ಮತ್ತು ನ್ಯಾಯಯುತ ಪರಿಹಾರಕ್ಕೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಕಾರಿಗಳ ಕಚೇರಿ ಎದುರು ಜಮಾಯಿಸಿದ ನೂರಾರು ಪ್ರತಿಭಟನಕಾರರು ಸರಕಾರಗಳ ವಿರುದ್ದ ಗೋಷಣೆ ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಳಿಕ ದುದ್ದ ಗ್ರಾಮದ ಸಂತ್ರಸ್ಥ ಶಂಕರ್ ಮಾತನಾಡಿ, ಎಕನಾಮಿಕ್ ಕಾರಿಡಾರ್ ಯೋಜನೆಗೆ ಭೂಸ್ವಾೀನ ಪ್ರಕ್ರೀಯೆಯನ್ನು ಈಗಾಗಲೇ ಆರಂಭಿಸಲಾಗಿದ್ದು, ಈ ಯೋಜನೆಯು ಹಾಸನ, ಅರಸೀಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ಹಿರಿಯೂರು ತಾಲೂಕಿನ ನೂರಾರು ಹಳ್ಳಿಗಳ ಮೇಲೆ ಹಾದು ಹೋಗುತ್ತಿದೆ.
ಈ ಯೋಜನೆಯು ಹಳೆಯ ರಸ್ತೆಯ ಅಗಲೀಕರಣಕ್ಕಿಂತ ಹೊಸದಾಗಿ ನಿರ್ಮಿಸುತ್ತಿರುವ ಕಾರಣ ಸಾವಿರಾರು ಎಕರೆ ಈ ಯೋಜನೆಗೆ ಭೂಸ್ವಾೀನವಾಗಿದೆ. ಈ ಯೋಜನೆಯು ಸರಕಾರಿ ಮತ್ತು ಖಾಸಗಿಯವರ ಸಹಭಾಗಿತ್ವದ ಅಡಿಯಲ್ಲಿ ನಡೆಯುತ್ತಿದ್ದು, ಇಂತಹ ಯೋಜನೆಗಳಿಗೆ 2013ರ ಭೂಸ್ವಾೀನ ಕಾಯ್ದೆ ಪ್ರಕಾರ ಶೇಕಡ 70 ರಷ್ಟು ಸಂತ್ರಸ್ಥರ ರೈತರ ಮತ್ತು ನಾಗರೀಕರ ಒಪ್ಪಿಗೆಯನ್ನು ಪಡೆಯಬೇಕು. ಇಲ್ಲವಾದಲ್ಲಿ ಯೋಜನೆಯನ್ನು ಹಿಂಪಡೆಯಬೇಕು ಎಂದರು.
ತಮ್ಮ ಜೀವನಾ‘ಾರವಾಗಿರುವ ಕಷಿೃ ಭೂಮಿ, ಮನೆಗಳನ್ನು ರೈತರು ಮತ್ತು ನಾಗರೀಕರು ಈ ಹೆದ್ದಾರಿ ನಿರ್ಮಾಣಕ್ಕಾಗಿ ಬಿಟ್ಟುಕೊಡಬೇಕಾಗಿದ್ದು, ರೈತರಿಗೆ ಸಾಕಷ್ಟು ಆದಾಯ ತರುವ ತೆಂಗು, ಅಡಿಕೆ, ಮಾವು, ಹಲಸು ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾಗೂ ಸದಾಕಾಲ ತರಕಾರಿ ಬೆಳೆಯುವಂತಹ ಫಲವತ್ತಾದ ಭೂಮಿಯು ಈ ಯೋಜನೆಗೆ ಬಲಿಯಾಗುತ್ತಿದೆ ಎಂದರು.
ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಸರಿಯಾಗಿ ಬೆಲೆ ಸಿಗದೇ ತಮ್ಮ ಜೀವನೋಪಾಯವೇ ಸಂಕಷ್ಟದಿಂದ ಕೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಯೋಜನೆಗೆ ಭೂಮಿ, ಮನೆ- ಮಠ ಕಳೆದುಕೊಳ್ಳುವ ರೈತರಿಗೆ ನಮ್ಮ ಭೂಮಿ ನಮ್ಮ ಹಕ್ಕು. ಭೂಮಿಗೆ ಕೊಡಲೇಬೇಕು, ಒಂದೇ ಭಾರತ, ಒಂದೇ ಯೋಜನೆ, ಒಂದೇ ಪರಿಹಾರ ಬೇಕು ಎಂಬಂತೆ ನ್ಯಾಯಯುತ ಪರಿಹಾರ ನೀಡಬೇಕು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಗ್ರಾಮದ ಸಂತ್ರಸ್ಥರಾದ ಗಿರಿಗೌಡ, ದೊಡ್ಡೇಗೌಡ, ನವೀನ್‌ಕುಮಾರ್, ನಂಜೇಗೌಡ, ಪರಮೇಶ, ಚೌಡೇಗೌಡ, ನಾಗೇಶ್, ನಿಂಗೇಗೌಡ, ಇತರರು ಇದ್ದರು.
ಪೋಟೋ ಶೀರ್ಷಿಕೆ