ಹಿರಿಯೂರಲ್ಲಿ 25ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾದರ್ಶನ

CTD 21 DC MEETING--001
Published on


ಚಿತ್ರದುರ್ಗ:ಮುಖ್ಯಮಂತ್ರಿ ಆಶಯದಂತೆ ಪ್ರತಿ ತಿಂಗಳು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರದಲ್ಲಿ ಪ್ರತಿ ತಿಂಗಳು ಜನತಾದರ್ಶನ ಆಯೋಜಿಸಲಾಗುತ್ತಿದೆ. ಮೊದಲ ಜಿಲ್ಲಾಮಟ್ಟದ ಜನತಾದರ್ಶನ ಸೆ.25ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಹಿರಿಯೂರಿನ ತಹಾಪ್ಯಾಲೇಸ್‌ನಲ್ಲಿ ಆಯೋಜಿಸಲಾಗುವುದೆಂದು ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಹೇಳಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜನತಾ ದರ್ಶನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಈ ಕಾರ‌್ಯಕ್ರಮದ ವಿಜೃಂಭಣೆ ಆರಂಭಕ್ಕೆ ಕ್ರಮ ವಹಿಸಬೇಕಿದೆ. ಸಾರ್ವಜನಿಕರು ಜಿಲ್ಲಾಮಟ್ಟದ ವಿವಿಧ ಇಲಾಖೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು,ಸ್ಥಳೀಯವಾಗಿ ಅಹ ವಾಲುಗಳನ್ನು ಸ್ವೀಕರಿಸಿ,ಕಾಲಮಿತಿಯಲ್ಲಿ ಪರಿಹಾರ ಒದಗಿಸಲು ಜನತಾದರ್ಶನ ಏರ್ಪಡಿಸಲಾಗುತ್ತಿದೆ. ಪ್ರತಿ 15 ದಿನಗಳಿಗೆ ಒಮ್ಮೆ ಜಿಲ್ಲಾ ಧಿಕಾರಿ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಜನತಾದರ್ಶನ ನಡೆಯಲಿದೆ ಎಂದರು.
ಸಮಸ್ಯೆಗಳಿದ್ದರೆ ಜಿಲ್ಲೆಯ ಯಾವುದೇ ತಾಲೂಕಿನ ಸಾರ್ವಜನಿಕರು ಅಹವಾಲು,ಅರ್ಜಿಗಳನ್ನು ಜನತಾದರ್ಶನದಲ್ಲಿ ಸಲ್ಲಿಸಿ,ಸ್ವೀಕೃತಿ ಪ ಡೆಯಬೇಕು. ಅರ್ಜಿ ಸ್ವೀಕಾರಕ್ಕೆ ಸ್ಥಳದಲ್ಲಿ ಅಗತ್ಯಕೌಂಟರ್‌ಗಳನ್ನು ತೆರೆಯಲಾಗುವುದು. ಸಾರ್ವಜನಿಕ ಕುಂದುಕೊರತೆ ಸ್ವೀಕೃತಿ ಪೋರ್ಟ ಲ್‌ನಲ್ಲಿ ದಾಖಲಿಸಿ,ಅರ್ಜಿಗಳ ಸಮರ್ಪಕ ವಿಲೇವಾರಿಗೆ ಕ್ರಮ ವಹಿಸಬೇಕು. ಮಾಸಾಶನಗಳ ಅರ್ಜಿದಾರರು ಅರ್ಹರಿದ್ದರೆ,ಸ್ಥಳದಲ್ಲೇ ಮಂಜೂರಾತಿ ನೀಡಬೇಕು.
ಜನತಾದರ್ಶನ ಸಂದರ್ಭದಲ್ಲಿ ವಿವಿಧ ಇಲಾಖೆಗಳು ವಸ್ತುಪ್ರದರ್ಶನ ಮಳಿಗೆಗಳನ್ನು ತೆರೆದು ನಾನಾ ಯೋಜನೆಗಳ ಕುರಿತಂತೆ ಮಾಹಿತಿ ಒದಗಿಸಬೇಕು. ವಿವಿಧ ಯೋಜನೆಗಳಡಿ ಸೌಲಭ್ಯಗಳು,ಮಂಜೂರಾತಿ ಪತ್ರಗಳನ್ನು ಫಲಾನುಭವಿಗಳಿಗೆ ವಿತರಿಸಲು ಅಗತ್ಯ ಸಿದ್ಧತೆ ಮಾ ಡಿಕೊಳ್ಳಬೇಕೆಂದರು.ಎಡಿಸಿ ಬಿ.ಟಿ.ಕುಮಾರಸ್ವಾಮಿ,ಉಪವಿಭಾಗಾಧಿಕಾರಿ ಎಂ.ಕಾರ್ತಿಕ್,ಎಸ್‌ಪಿ ಕುಮಾರಸ್ವಾಮಿ,ಹಿರಿಯೂರು ತಹಸೀ ಲ್ದಾರ್ ರಾಜೇಶ್ ಮತ್ತಿತರ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net