ಹಿರಿಯರು ಅನುಭವದ ನಿಘಂಟು

Oplus_0
ಹಾರಕೂಡ ಶ್ರೀಮಠದಲ್ಲಿ ಹಿರಿಯ ನಾಗರಿಕರಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೭೪೪ನೇ ತುಲಾಭಾರ ಸಮಾರಂಭವನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಮೇಘರಾಜ ನಾಗರಾಳೆ, ವಾಮನರಾವ ಬಿರಾದಾರ, ಸುಭಾಷ ಮುರುಡ ಬೆಳಮಗಿ, ಸಂಗಣ್ಣ ಪಾಟೀಲ್, ಜಗದೀಶ ಪಾಟೀಲ್ ಮುಡಬಿ, ಮಲ್ಲಿನಾಥ ಹಿರೇಮಠ ಹಾರಕೂಡ, ಸುಭಾಷಚಂದ್ರ ನಾಗರಾಳೆ, ಬಿ.ಕೆ ಹಿರೇಮಠ ಇತರರಿದ್ದರು.
Published on

ಬಸವಕಲ್ಯಾಣ: ಹಿರಿಯರು ಜೀವನಾನುಭವದ ನಿಘಂಟು ಇದ್ದಂತೆ ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾದಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.

ಹಾರಕೂಡ ಶ್ರೀಮಠದಲ್ಲಿ ಹಿರಿಯ ನಾಗರಿಕರಿಂದ ಸೋಮವಾರ ಆಯೋಜಿಸಿದ್ದ ಗುರುವಂದನೆ ಹಾಗೂ ೭೪೪ನೇ ತುಲಾಭಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಒಂದು ಮನೆಗೂ ಹಾಗೂ ಗ್ರಾಮಕ್ಕೂ ನಿಜವಾದ ಭೂಷಣವೆಂದರೆ ಹಿರಿಯ ಜೀವಗಳು. ಬದುಕಿನ ಸವಾಲುಗಳಿಗೆ ಸಮರ್ಪಕ ಉತ್ತರ ನೀಡುವ ಭೌದ್ಧಿಕ ಹಿರಿಮೆ ಅವರಲ್ಲಿರುತ್ತದೆ ಎಂದರು.

ಹರಿಹರನ ಹೃದಯಕ್ಕೆ ಸಮೀಪದಲ್ಲಿರುವಾತನೆ ಹಿರಿಯ ಎನ್ನುವ ಮಾತಿದೆ. ಹಾಗಾಗಿ ಬಾಲ್ಯ, ತಾರುಣ್ಯ, ಬ್ರಹ್ಮಚಾರ್ಯ, ಗೃಹಸ್ಥ ಮತ್ತು ಲೋಕ ವ್ಯವಹಾರಗಳ ಅರಿವಿನ ಬುತ್ತಿ ಹಿರಿತನದಲ್ಲಿ ಕಾಣುತ್ತೇವೆ. ಒಂದು ಕುಟುಂಬ ಮೊದಲು ಮಾಡಿ ರಾಷ್ಟ್ರಹಾಗೂ ಜಾಗತಿಕ ಮಟ್ಟದಲ್ಲೂ ಹಿರಿಯರ ಮಾರ್ಗದರ್ಶನ ಪ್ರಧಾನವಾಗಿರುತ್ತದೆ. ಹಿರಿಯರನ್ನು ಗೌರವಿಸುವ ಮನೆ ಮಂತ್ರಾಲಯವಾದರೆ, ಗ್ರಾಮ ಸೌಖ್ಯದ ನೆಲೆಯಾಗಿ ಮಾರ್ಪಡುತ್ತದೆ. ನಮಗೆ ಗುರುವಂದನೆ ಸಲ್ಲಿಸಿ, ತುಲಾಭಾರ ಸೇವೆ ಸಲ್ಲಿಸಿರುವ ಎಲ್ಲ ಹಿರಿಯ ನಾಗರಿಕರು ಹಾಗೂ ಸರ್ವರಿಗೂ ಸನ್ಮಂಗಳವಾಗಲೆಂದು ಶುಭ ಹಾರೈಸಿದರು.

ಹಾರಕೂಡ ಮಂಡಲ ಪಂಚಾಯಿತಿಯ ಮಾಜಿ ಅಧ್ಯಕ್ಷ ಮೇಘರಾಜ ನಾಗರಾಳೆ ಮಾತನಾಡಿದರು.

ವಾಮನರಾವ ಬಿರಾದಾರ ಭಿನ್ನವತ್ತಳೆ ವಾಚನ ಮಾಡಿದರು. ಪ್ರಮುಖರಾದ ಸುಭಾಷ ಮುರುಡ ಬೆಳಮಗಿ, ಸಂಗಣ್ಣ ಪಾಟೀಲ್, ಜಗದೀಶ ಪಾಟೀಲ್ ಮುಡಬಿ, ಮಲ್ಲಿನಾಥ ಹಿರೇಮಠ ಹಾರಕೂಡ, ಸುಭಾಷಚಂದ್ರ ನಾಗರಾಳೆ, ಬಿ.ಕೆ ಹಿರೇಮಠ, ಸಿದ್ರಾಮಪ್ಪ ಗುದಗೆ, ಮಾಧುರಾಯ ಕೆರಗೋಟೆ, ಪಂಚಾಕ್ಷರಿ ಹಿರೇಮಠ, ಶಂಕರರಾವ ಮಾಣಿಕೆ, ಬಾಬುರಾವ ಹತ್ತೆ ಇತರರಿದ್ದರು.

ಅಂಬರಾಯ ಉಗಾಜಿ ಸ್ವಾಗತಿಸಿ ನಿರೂಪಣೆ ಮಾಡಿದರು. ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮುನ್ನ ಹೂವಿನಿಂದ ಅಲಂಕೃತ ಎತ್ತಿನ ಬಂಡಿಯ ಮೇಲೆ ಪಲ್ಲಕ್ಕಿಯನ್ನುಟ್ಟು ಹಾರಕೂಡ ಶ್ರೀಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net