ಹಿರಿಯರಿಗೆ ಮೂಳೆ ಬಗ್ಗೆ ಜಾಗೃತಿ ಅವಶ್ಯ

Bone awareness is essential for seniors
ವಿಜಯಪುರದ ಅಖಿಲ ಭಾರತ ವೀರಶೈವ ಮಹಾಸಭೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತಿ ಸುಭಾಸ ಯಾದವಾಡ ಮಾತನಾಡಿದರು. ಡಾ. ರವಿಕುಮಾರ ಬಿರಾದಾರ, ವಿ.ಸಿ. ನಾಗಠಾಣ ಇದ್ದಾರೆ.
Published on

ವಿಜಯಪುರ: ವಯಸ್ಸಾದಂತೆಲ್ಲ ಮೂಳೆಗಳು ಗಟ್ಟಿತನ ಕಳೆದುಕೊಳ್ಳುತ್ತವೆ. ಹೀಗಾಗಿ ಹಿರಿಯ ನಾಗರಿಕರು ಮೂಳೆ ಬಗ್ಗೆ ಜಾಗೃತಿ ವಹಿಸಬೇಕೆಂದು ಬಿಎಲ್‌ಡಿಇ ವೈದ್ಯಕೀಯ ಮಹಾವಿದ್ಯಾಲಯದ ಎಲುವು ಹಾಗೂ ಕೀಲುಗಳ ವಿಭಾಗದ ಪ್ರಾಧ್ಯಾಪಕ ಡಾ. ರವಿಕುಮಾರ ಬಿರಾದಾರ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಮಹಾಸಭೆಯ ಸಭಾಂಗಣದಲ್ಲಿ ರೋಟರಿ ಪ್ರೋಬಸ್ ಕ್ಲಬ್ ಹಾಗೂ ಹಿರಿಯ ನಾಗರಿಕರ ವೇದಿಕೆ (ಉತ್ತರ) ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂದ್ರತೆ ಕಡಿಮೆಯಾದ ಪೊಳ್ಳು ಮೂಳೆಗಳಿಗೆ ಸ್ವಲ್ಪ ಪೆಟ್ಟಾದರೂ ಮುರಿದುಬಿಡುತ್ತವೆ. ಕಾರಣ ಹಿರಿಯ ನಾಗರಿಕರು ನಡೆಯುವಾಗ, ಮೆಟ್ಟಿಲು ಏರುವಾಗ, ನಯವಾದ ನೆಲದಲ್ಲಿ ಹೆಜ್ಜೆ ಹಾಕುವಾಗ ಜಾರಿ ಬೀಳದಂತೆ ಜಾಗ್ರತೆ ವಹಿಸಬೇಕು ಎಂದರು.

ವೇದಿಕೆ ಉಪಾಧ್ಯಕ್ಷ ಸಾಹಿತಿ ಸುಭಾಸ ಯಾದವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾಸಭೆಯ ಅಧ್ಯಕ್ಷ ವಿ.ಸಿ. ನಾಗಠಾಣ, ವೇದಿಕೆಯ ಸಹಕಾರ್ಯದರ್ಶಿ ಪೋಳ, ಎಸ್.ಜಿ. ನಾಡಗೌಡ ಮತ್ತಿತರರಿದ್ದರು.

ಮಹಾದೇವ ಹಾಲಳ್ಳಿ ಸ್ವಾಗತಿಸಿದರು. ಬಿ.ಎಸ್. ಸಜ್ಜನ ಪ್ರಾರ್ಥಿಸಿದರು. ಕೋಶಾಧ್ಯಕ್ಷ ಜಗದೀಶ ಮೋಟಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net