ಹಿರಿಯರಿಗೆ ಗೌರವದಿಂದ ನೋಡಿಕೊಳ್ಳಿ

ydg11
Published on

ಯಾದಗಿರಿ: ಜನ್ಮ ನೀಡಿದ ತಂದೆ-ತಾಯಿ ಮತ್ತು ವಿದ್ಯೆ ಕಲಿಸಿದ ಗುರುಗಳಿಗೆ ಗೌರವ ನೀಡುವ ಮೂಲಕ ಮಾನವೀಯತೆ ಮೆರೆದು ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ವಿಶ್ವನಾಥರಡ್ಡಿ ಮುದ್ನಾಳ್ ಸಭಾಂಗಣದಲ್ಲಿ ಮಂಗಳವಾರ ಜಿ¯್ಲÁಡಳಿತ, ಜಿ¯್ಲÁ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜ ಸನ್ಮಾರ್ಗದಲ್ಲಿ ನಡೆಯಲು ಪ್ರತಿಯೊಬ್ಬ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದ್ದು, ಪ್ರಸ್ತುತ ಮುಂದುವರೆದ ಸಮಾಜದ ಪ್ರತಿಯೊಬ್ಬ ಯುವ ಜನತೆ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ತಿಳಿಸಿದರು.

ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಮಾತನಾಡಿ, ಮಕ್ಕಳು ವೃz್ದÁಶ್ರಮಕ್ಕೆ ಹಿರಿಯರನ್ನು ಕಳುಹಿಸದೆ ಅವರನ್ನು ಉತ್ತಮವಾದ ರೀತಿಯಲ್ಲಿ ನೋಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇದ್ದವು. ಆಗ ಅಪ್ಪ ಅಮ್ಮ, ಅಕ್ಕ-ತಮ್ಮ, ಚಿಕ್ಕಪ್ಪ-ದೊಡ್ಡಪ್ಪ ಹೀಗೆ ಸಂಬAಧಗಳು ಅನ್ಯೋನ್ಯವಾಗಿದ್ದವು. ಹಿರಿಯರನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.

ಜಿ¯್ಲÁ ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲï ಮಾತನಾಡಿದರು. ಸಿಪಿಐ ಸುನೀಲï ಕುಮಾರ ಮೂಲಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ, ಹಿರಿಯ ನಾಗರಿಕ ಸೋಮನಾಥ ರೆಡ್ಡಿ ಯಲ್ಹೇರಿ, ಬಂಡೆಪ್ಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net