ಹಿರಿಯರ ಸೇವೆಯಲ್ಲಿ ದೇವರನ್ನು ಕಾಣಬೇಕು

28Manju9
ಬೆಳಗಾವಿ ತಾಲೂಕಿನ ಕಿಣಿಯೆ ಗ್ರಾಮದ ಶಾಂತಾಯಿ ವೃದ್ಧಾಶ್ರಮದಲ್ಲಿ ಗುರುವಾರ ಪ್ರಾರ್ಥನಾ ಮಂದಿರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ವಿಜಯ ಪಾಟೀಲ, ವಿಜಯ ಮೋರೆ, ಜಯಂತ ಹುಂಬರವಾಡಿ, ಸಮೀರ ಕಣಬರ್ಗಿ, ಕೀತ್ ಮಚಾಡೊ, ದಿಲೀಪ್ ಚಿಟ್ನಿಸ್, ಸಿದ್ಧಾರೂಢ ಹುಂದ್ರೆ ಇತರರಿದ್ದರು.
Published on

ಬೆಳಗಾವಿ: ಹಿರಿಯ ನಾಗರಿಕರೇ ನಮಗೆ ಕಣ್ಣಿಗೆ ಕಾಣುವ ದೇವರು. ಅವರ ಸೇವೆ ಮಾಡುವ ಮೂಲಕ ದೇವರ ಸೇವೆ ಮಾಡೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಬೆಳಗಾವಿ ತಾಲೂಕಿನ ಕಿಣಿಯೆ ಗ್ರಾಮದಲ್ಲಿರುವ ಶಾಂತಾಯಿ ವೃದ್ಧಾಶ್ರಮದಲ್ಲಿ ಗುರುವಾರ ಪ್ರಾರ್ಥನಾ ಮಂದಿರ ಉದ್ಘಾಟಿಸಿ ಮಾತನಾಡಿ, ಸಮಾಜದ ದುರ್ಬಲರೆಂದು ಗುರುತಿಸಲ್ಪಟ್ಟಿರುವ ಹಿರಿಯ ನಾಗರಿಕರು, ಅಂಗವಿಕಲರು, ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ನಮ್ಮನ್ನು ದುರ್ಬಲರ ಸೇವೆಯಲ್ಲಿ ತೊಡಗಿಸಿಕೊಂಡಾಗ ಸಿಗುವ ಆತ್ಮತಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದರು.

ವೃದ್ಧಾಶ್ರಮದ ಅಧ್ಯಕ್ಷ ವಿಜಯ ಪಾಟೀಲ, ಕಾರ್ಯಾಧ್ಯಕ್ಷ ವಿಜಯ ಮೋರೆ, ಜಯಂತ ಹುಂಬರವಾಡಿ, ಸಮೀರ ಕಣಬರ್ಗಿ, ಕೀತ್ ಮಚಾಡೊ, ದಿಲೀಪ್ ಚಿಟ್ನಿಸ್, ಸಿದ್ಧಾರೂಢ ಹುಂದ್ರೆ, ಆನಂದ ದೇಸಾಯಿ, ಪ್ರವೀಣ್ ದೊಡ್ಡಣ್ಣನವರ್, ವಿಶ್ವನಾಥ್ ಕೆ. ಸಾಮಂತ್, ರಾಜೇಂದ್ರ ಹರಕುಣಿ, ನಿಲೇಶ್ ಕೋಚಾ, ಬಸವನಗೌಡ ಪಾಟೀಲ, ಯುವರಾಜ್ ಕದಂ, ಬಾಮನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕುಂತಲಾ ಎಸ್. ಹಣಬರ, ಪ್ರಿಯಾಂಕಾ ಪಿ. ಪಾಟೀಲ್, ವರ್ಷಾ ದುಕಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net