ಹಿರಿಯರ ಆರೋಗ್ಯ ತಪಾಸಣೆ ಅಗತ್ಯ

ydg6
ಕೆಂಭಾವಿಯಲ್ಲಿ ಶನಿವಾರ ಏರ್ಪಡಿಸಿದ್ದ 50 ವರ್ಷ ಮೇಲ್ಪಟ್ಟವರ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವೈದ್ಯ ಡಾ.ವರ್ಧಮಾನ ಮಾತನಾಡಿದರು. ಸಿದ್ಧನಗೌಡ ಪೊಲೀಸ್ ಪಾಟೀಲ್, ಡಾ.ಗಿರೀಶ ಕುಲಕರ್ಣಿ, ವಾಮನರಾವ ದೇಶಪಾಂಡೆ ಇದ್ದರು.
Published on

ಕೆಂಭಾವಿ: ಹಿರಿಯ ನಾಗರಿಕರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಸಂಭವಿಸಬಹುದಾದ ಮಹಾರೋಗ ತಡಗಟ್ಟಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ್ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ವಿಶ್ವ ಅಲ್‌ಝೈಮರ್ (ಮರೆಗುಳಿ) ದಿನ ನಿಮಿತ್ತ ಏರ್ಪಡಿಸಿದ್ದ 50 ವರ್ಷ ಮೇಲ್ಪಟ್ಟವರ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿದ ಅವರು, ಸದ್ಯದ ಸ್ಥಿತಿಯಲ್ಲಿ 50 ವಯಸ್ಸು ದಾಟಿದ ಪ್ರತಿಯೊಬ್ಬರಲ್ಲಿ ಬಿಪಿ, ಶುಗರ್, ಮರೆವು, ತಲೆಸುತ್ತುವಿಕೆ ಸೇರಿ ಹಲವು ರೋಗಗಳು ಕಾಣಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ತಜ್ಞ ವೈದ್ಯರ ಬಳಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಜ್ಞ ವೈದ್ಯ ಡಾ.ವರ್ಧಮಾನ ಮಾತನಾಡಿ, ಅಲ್‌ಝೈಮರ್ ಕಾಯಿಲೆಯಲ್ಲಿ ಹಲವು ವಿಧಗಳಿವೆ. ಜ್ಞಾಪಕ ಶಕ್ತಿ ಕಳೆದುಕೊಳ್ಳುವುದು, ಮಾತುಗಳಲ್ಲಿ ವ್ಯತ್ಯಾಸ, ಖಿನ್ನತೆ ಕಂಡು ಬರುತ್ತವೆ. ಇವುಗಳ ನಿಯಂತ್ರಣಕ್ಕೆ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉತ್ತಮ ಚಿಕಿತ್ಸೆ ನೀಡಿ ಉಚಿತ ಔಷಧ ವಿತರಿಸುವುದಾಗಿ ತಿಳಿಸಿದರು.

ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಯಲ್ಲಾಲಿಂಗ ಇದ್ದರು. ರೇವಣಿಸಿದ್ದಪ್ಪ ಸ್ವಾಗತಿಸಿದರು, ದಿಲೀಪ ವಂದಿಸಿದರು. 200ಕ್ಕೂ ಹೆಚ್ಚು ಹಿರಿಯರ ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net