

ಹಾಸನ: ನಗರದ ಬಡ ಹಾಗೂ ಮಧ್ಯಮ ವರ್ಗದ ಪಾಲಿನ ಅತ್ಯಂತ ಜನಪ್ರಿಯ ಹಾಗೂ ಜನಾನುರಾಗಿ ವೈದ್ಯರಾಗಿದ್ದ ಡಾ.ಸಿ.ಡೇವಿಡ್ ಕರ್ಕಡ(82) ಅವರು ಬುಧವಾರ ರಾತ್ರಿ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಕಳೆದ ಹಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡೇವಿಡ್ ಅವರು ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.ಮೃತರು ತಮ್ಮ ವೃತ್ತಿ ಜೀವನವನ್ನು ನಗರದ ಮಿಷನ್ ಆಸ್ಪತ್ರೆಯಲ್ಲಿ ಆರಂಭಿಸಿ ತದನಂತರ ಆರ್.ಸಿ.ರಸ್ತೆಯಲ್ಲಿ ಸ್ವಂತವಾಗಿ ಕೃಪಾ ಕ್ಲಿನಿಕ್ ಆರಂಭಿಸಿ 48 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ತಮ್ಮ ವೃತ್ತಿ ಜೀವನದಲ್ಲಿ ಹಣಕ್ಕಾಗಿ ಆಸೆ ಪಡದೆ ಬಡ ಜನರಿಗಾಗಿ ತಮ್ಮ ಸೇವೆಯನ್ನು ಪುಡುಪಾಗಿಟ್ಟಿದ್ದರು. ಮೃತರ ಪಾರ್ಥೀವ ಶರೀರವನ್ನು ರಕ್ಷಣಾಪುರಂ 2ನೇ ಕ್ರಾಸ್‌ನ ಅವರ ಸ್ವಗೃಹದಲ್ಲಿ ಇರಿಸಲಾಗಿದೆ. ಅಂತಿಮ ಕ್ರಿಯೆ ಕಾರ್ಯವು ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಗರದ ಸಾಲಗಾಮೆ ರಸ್ತೆಯಲ್ಲಿರುವ ಕ್ರೈಸ್ತರ ಸಮಾಧಿಯಲ್ಲಿ ನೆರವೇರಿಸ ಲಾಗುವುದು ಎಂದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.