ಹಿರಿಯ ರಂಗ ನಟರಿಗೆ ಸನ್ಮಾನ

IMG-20250327-WA0007
Published on

ಚಾಮರಾಜನಗರ: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದ ಅರಳಿಕಟ್ಟೆ ವೇದಿಕೆಯಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಜಿಲ್ಲೆಯ ರಂಗಭೂಮಿ ಕಲಾವಿದರಿಗೆ ರಂಗ ಗೌರವ ಮಾಡಲಾಯಿತು.

ರಂಗ ನಿರ್ದೇಶಕ ಕಿರಣ್ ಗಿರ್ಗಿ ಮಾತನಾಡಿ, ಅಭ್ಯಾಸಿ ಟ್ರಸ್ಟ್ ಸಂಸ್ಥೆಯು ವರ್ಷಪೂರ್ತಿ ರಂಗಚಟುವಟಿಕೆಗಳನ್ನು ಮಾಡುಲಾಗುತ್ತಿದೆ. ರಂಗಭೂಮಿ ದಿನದ ಅಂಗವಾಗಿ ಮೂವತ್ತು ವರ್ಷಗಳಿಂದ ಚಾಮರಾಜನಗರ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಕಲಾವಿದರಾದ ಮಿಮಿಕ್ರಿ ಮಲ್ಲಣ್ಣ, ಗಣಪತಿ ನಾಗೇಶ್, ರಿದಂ ರಾಮಣ್ಣ, ಸಿದ್ದಣ್ಣ ರಾಮಸಮುದ್ರ ಇವರಿಗೆ ರಂಗ ಗೌರವ ಮಾಡಲಾಗಿದೆ. ಇದು ನಮ್ಮ ಸಂಸ್ಥೆಯ ಜವಾಬ್ದಾರಿ ಎಂದು ಭಾವಿಸಿದ್ದೇನೆ. ನಾಟಕದ ಮೂಲಕ ಬದುಕನ್ನು ಸವೆಸಿರುವ ಇವರು ನಮಗೆ ಆದರ್ಶವಾಗಿದೆ ಎಂದರು.

ಕಲಾವಿದರಾದ ನಂದಿನಿ ರವಿಕುಮಾರ್ ರಂಗಭೂಮಿ ದಿನದ ಸಂದೇಶ ವಾಚಿಸಿದರು. ಅಭ್ಯಾಸಿ ಟ್ರಸ್ಟ್ ತಂಡದವರಿಂದ ರಂಗ ಗೀತೆಗಳನ್ನು ಪ್ರಸ್ತುತ ಪಡಿಸಲಾಯಿತು. ಕೊಂಬು ಕಹಳೆ ಕಲಾವಿದರಾದ ರವಿಚಂದ್ರ ಪ್ರಸಾದ್, ಕಲಾವಿದೆ ಜ್ಯೋತಿ, ಲೋಕೇಶ್ ನಲ್ಲೂರು, ಸಿರಿಗನ್ನಡ ಪುಸ್ತಕ ಮಳಿಗೆ ಗೋವಿಂದರಾಜು ಹಾಗೂ ಸಾರ್ವಜನಿಕರು ಹಾಜರಿದ್ದರು.

ಗೌರವ ಸ್ವೀಕರಿಸಿದ ಗಣಪತಿ ನಾಗೇಶ್ ಅವರು ಮಾತನಾಡಿ ಅಭ್ಯಾಸಿ ಟ್ರಸ್ಟ್ ಸಂಸ್ಥೆಯು ನಮ್ಮಂಥವರನ್ನು ಗುರುತಿಸಿ ಸನ್ಮಾನಿಸಿರುವುದು ಸಂತಸ ತಂದಿದೆ. ರಂಗ ನಿರ್ದೇಶಕ ಕಿರಣ್ ಗಿರ್ಗಿ ಅವರ ಕನಸುಗಳು ಸಾಕಾರಗೊಂಡು ಸಂಸ್ಥೆಯು ಹೆಮ್ಮರವಾಗಿ ಬೆಳೆಯಲಿ ಎಂದು ಹರ್ಷ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net