ಹಿರಿಯ ನಾಗರಿಕರಿಗೆ ನೇತ್ರ ತಪಾಸಣೆ ಶಿಬಿರ

EYE CAMP NEW
Published on

ಚಿತ್ರದುರ್ಗ: ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ 60 ವರ್ಷ ಹಾಗೂ ಮೀರಿದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಕರಿಗೆ ನೇತ್ರ ತಪಾಸಣೆ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಶೇಷ ಅಭಿಯಾನ ಯೋಜನೆಯನ್ನು ಆರೋಗ್ಯ ಇಲಾಖೆ ಸಮನ್ವಯದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಫೆ.24ರಂದು ಹೊಳಲ್ಕೆರೆ ಗುರುಭವನ, 25ರಂದು ಹೊಸದುರ್ಗ ತಾಲೂಕು ಆಸ್ಪತ್ರೆ, 28ರಂದು ಮೊಳಕಾ ಲ್ಮೂರು ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ, ಮಾರ್ಚ್ 1ರಂದು ಚಳ್ಳಕೆರೆ ಸರ್ಕಾರಿ ನೌಕರರ ಸಂಘದ ಸಭಾಂಗಣ, 3ರಂದು ಚಿತ್ರದುರ್ಗದ ಜಿಲ್ಲಾ ಬಾಲಭವನ ಸಭಾಂಗಣ ಹಾಗೂ 5ರಂದು ಹಿರಿಯೂರು ನೆಹರು ಮೈದಾನದ ಎ. ಕೃಷ್ಣಪ್ಪ ರೋಟರಿ ಸಭಾಭವನದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2.30ರವರೆಗೆ ನಡೆಯಲಿದೆ.

ಶಿಬಿರಕ್ಕೆ ಹಾಜರಾಗುವಾಗ ಗುರುತಿನ ಚೀಟಿ, ಪಾನ್, ಆಧಾರ್, ಚುನಾವಣಾ ಗುರುತಿನ ಚೀಟಿ ಇತ್ಯಾದಿ ಜನ್ಮ ದಿನಾಂಕವಿರುವ ದಾಖಲಾತಿ ಪ್ರತಿ, ಬಿಪಿಎಲ್ ಪಡಿತರ ಚೀಟಿಯೊಂದಿಗೆ ಹಾಜರಾಗುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net