ಹಿರಿಜೀವಗಳಿಗೆ ಈಶ್ವರಿಯ ವಿದ್ಯಾಲಯ ದಾರಿದೀಪ

hnl eeshvari samaja aug 25
Published on

ಹೊನ್ನಾಳಿ: ಸಂಸಾರದಲ್ಲಿ ನೆಮ್ಮದಿ ಕಳೆದುಕೊಂಡ ಹಲವು ಕುಟುಂಬಗಳಿಗೆ ಹಾಗೂ ಹಿರಿಯ ಜೀವಗಳಿಗೆ ಈಶ್ವರಿಯ ವಿದ್ಯಾಲಯಗಳು ಅವರ ಜೀವನಕ್ಕೆ ದಾರಿದೀಪವಾಗಿವೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಶುಕ್ರವಾರ ಹೊನ್ನಾಳಿಯ ಈಶ್ವರಿ ವಿದ್ಯಾಲಯದಲ್ಲಿ ಆಯೋಜಿಸಿದ್ದ ವಿದ್ಯಾಲಯದ ಹಿರಿಯರಾದ ಪ್ರಕಾಶಮಣಿಯವರ 16ನೇ ಪುಣ್ಯಸ್ಮತಿ ಹಾಗೂ ರಕ್ಷಾಬಂಧನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜೀವನದಲ್ಲಿ ಒತ್ತಡಕ್ಕೆ ಸಿಲುಕಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಕೆಲವರು ಹಣ ಆಸ್ತಿ ಮಾಡುವುದಕ್ಕೆ ಹೋದರೆ, ಇನ್ನೂ ಕೆಲವರು ಶಾಂತಿಯನ್ನು ಹುಡುಕಿಕೊಂಡು ಈಶ್ವರಿಯ ವಿದ್ಯಾಲಯಕ್ಕೆ ಬಂದು ನಮ್ಮದಿ ಕಂಡುಕೊಂಡು ಸುಖ ಜೀವನ ಸಾಗಿಸುತ್ತಿದ್ದಾರೆ ಎಂದರು.
ಜೀವನದಲ್ಲಿ ಎಷ್ಟು ಬೇಕಾದರೂ ಗಳಿಸಬಹುದು ಆದರೆ ಕೋಟಿ ಕೊಟ್ಟರೂ ಶಾಂತಿ ಹಾಗೂ ನೆಮ್ಮದಿ ಸಿಗುವುದಿಲ್ಲ. ಇಂತಹ ನಿರ್ಮಲ ವಾತಾವರಣ ಸಿಗಬೇಕಾದರೆ ಇಂತಹ ಪ್ರಶಾಂತ ವಾತಾವರಣದಲ್ಲಿ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಈಶ್ವರಿಯ ಸಂಚಾಲಕ ರಾಜಯೋಗಿನಿ ಅನುಸೂಯಕ್ಕನವರು ಮಾತನಾಡಿ, ರಾಕಿ ಹಬ್ಬದ ಮಹಿಮೆ ಮತ್ತು ಅದರ ಅಗತ್ಯ ಕಾರ್ಯಗಳ ವಿವರಿಸಿ ರಾಕಿಗೆ ಅನೇಕ ಪೌರಾಣಿಕ,ಐತಿಹಾಸಿಕ ಸಂದರ್ಭಗಳು ಸಾಕ್ಷಿಯಾಗಿವೆ ಎಂದರು.
ಹೊನ್ನಾಳಿ ಈಶ್ವರಿ ವಿದ್ಯಾಲಯದ ಬ್ರಹ್ಮಕುಮಾರಿ ಜ್ಯೋತಿ ಅಕ್ಕ ಮಾತನಾಡಿದರು.
ಅತಿಥಿಗಳಾಗಿ ಕಾಂಗ್ರೇಸ್ ಮುಖಂಡ ಹೆಚ್‌ಎ ಉಮಾಪತಿ, ನಿಂಗಣ್ಣ,ಹೊನ್ನಾಳಿ ಪುರಸಭೆ ಮಾಜಿ ಅಧ್ಯಕ್ಷೆ ಸುಮಾ ಮಂಜುನಾಥ್, ಡಾ.ಕೆಂಚಪ್ಪ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಮಹೇಶ್ವರಪ್ಪ, ಚಿಲೂರು ಜ್ಞಾನವಾಹಿನಿ ವಿದ್ಯಾಸಂಸ್ಥೆ ಪ್ರಾಂಶುಪಾಲ ರವಿಕುಮಾರ, ದಾಗಿನಕಟ್ಟೆ ಬಸವನಗೌಡ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net