ಹಿರಾ ಶುಗರ್ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಸಾಧನೆ

6Snk1
Published on

ಸಂಕೇಶ್ವರ: ಶಿವಮೊಗ್ಗದ ಜವಾಹರಲಾಲ ನೆಹರು ನ್ಯೂ ಕಾಲೇಜ ಆಫ್ ಇಂಜಿನಿಯರಿಂಗ್ (ಜೆಎನ್‌ಎನ್‌ಸಿಇ)ನಲ್ಲಿ ಈಚೆಗೆ ಜರುಗಿದ ರಾಜ್ಯಮಟ್ಟದ ಪ್ರಾಜೆಕ್ಟ್ ಪ್ರದರ್ಶನ ಸ್ಪರ್ಧೆಯಲ್ಲಿ (ಕೆಎಸ್‌ಸಿಎಸ್‌ಟಿ) ಹಿರಾ ಶುಗರ್ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಜ್ಯಮಟ್ಟದ ಬೆಸ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.

ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಶೆಟ್ಟೆನ್ನವರ, ಅಭಿಷೇಕ ಬೇವಿನಕೊಪ್ಪಮಠ, ಆಕಾಶ ಪಾಟೀಲ ಮತ್ತು ವಿವೇಕ ನಂದಗಾವಿ ಸಿದ್ಧಪಡಿಸಿದ ಆಟೋಮ್ಯಾಟಿಕ್ ರೈನ್ ಸೆನ್ಸಿಂಗ್ ಆ್ಯಂಡ್ ಪ್ರೊಟೆಕ್ಷನ್ ಕವರ್ ಫಾರ್ ಕ್ರಾಪ್ ಗ್ರೇನ್ಸ್ ಆ್ಯಂಡ್ ಸೀಡ್ಸ್ ಎಂಬ ಪ್ರಾಜೆಕ್ಟ್ ಗೆ ರಾಜ್ಯಮಟ್ಟದ ಬೆಸ್ಟ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ.

ಇವರಿಗೆ ಡಾ.ಕೆ.ಎಂ.ಅಕ್ಕೋಳಿ ಮಾರ್ಗದರ್ಶನ ಮಾಡಿದ್ದರು.

ಕೆಎಸ್‌ಸಿಎಸ್‌ಟಿ ಸಂಯೋಜಕ ಪ್ರೊ.ಎಂ.ಎಸ್.ಪುಟಾನೆ, ಸಂಸ್ಥೆಯ ಅಧ್ಯಕ್ಷ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಡಾ.ಶಿವಲಿಂಗೇಶ್ವರ ಸ್ವಾಮೀಜಿ, ಮೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಎಸ್.ಎನ್.ಟೋಪಣ್ಣವರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net