

ಯಾದಗಿರಿ: ಸಮಾಜದಲ್ಲಿ ಮನೆ ಮಾಡಿದ ಮೌಢ್ಯ, ಅನಿಷ್ಠ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಠ-ಮಾನ್ಯಗಳಿಂದ ನಿರಂತರವಾಗಿ ಸಾಗಿಕೊಂಡು ಬಂದಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಜುಗೇರಿ ತಿಳಿಸಿದರು.
ಇಲ್ಲಿಗೆ ಸಮೀಪದ ಚಿತ್ತಾಪುರ ತಾಲೂಕಿನ ಸೂಗೂರು (ಎನ್) ಗ್ರಾಮದ ಭೋಜಲಿಂಗೇಶ್ವರ ಮಠದಲ್ಲಿ ಅಮಾವಾಸ್ಯೆ ನಿಮಿತ್ತ ಬುಧವಾರ ಸಂಜೆ ಆಯೋಜಿಸಿದ್ದ ಶಿವಾನುಭವ ಗೋಷ್ಠಿ ಹಾಗೂ ಪೀಠಾಪತಿ ಶ್ರೀ ಹಿರಗಪ್ಪ ತಾತನವರ ಮಹಾಪಾದ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ದುಃಖವನ್ನು ನಿವಾರಿಸುವ ಮಾತೆಯಂತೆ, ರೋಗವನ್ನು ತೊಲಗಿಸುವ ವೈದ್ಯರಂತೆ, ಅಜ್ಞಾನವನ್ನು ತೊಲಗಿಸುವ ಗುರುವನಂತೆ ಹಿರಗಪ್ಪ ತಾತನವರು ಭಕ್ತ ವರ್ಗದ ಕಷ್ಟ ಕಾರ್ಪಣ್ಯಗಳನ್ನು ಕಳೆಯುತ್ತಿದ್ದಾರೆ ಎಂದರು.
ಶ್ರೀಮಠದ ಉದ್ದಾರಕ್ಕಾಗಿ ಹಾಗೂ ಭಕ್ತರ ಏಳಿಗೆಗಾಗಿ ಸದಾ ಕಾಳಜಿ ವಹಿಸುವ ಮೂಲಕ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕುತ್ತಿದ್ದಾರೆ. ಆಧುನಿಕ ಕಾಲದಲ್ಲಿ ಭಕ್ತರ ಎದುರಿನಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ ಪುಣ್ಯಪುರುಷರು ಶ್ರೀಭೋಜಲಿಂಗೇಶ್ವರರು. ತಾತನವರು ಆ ಗುರುಗಳ ಭವ್ಯ ಶಿಲಾಮಂದಿರ ನಿಮರ್ಾಣ ಕಾರ್ಯವನ್ನು ಕೈಗೊಂಡ ಕಾಯಕ ಯೋಗಿಯಾಗಿದ್ದಾರೆ ಎಂದು ಬಣ್ಣಿಸಿದರು.