

ಹಾಸನ: ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಏಳು ದಿವಸಗಳ ವಿಶೇಷ ವಾರ್ಷಿಕ ಶಿಬಿರ ತಾಲೂಕಿನ ವಳಗೇರಹಳ್ಳಿಯಲ್ಲಿ ನಡೆಯುತ್ತಿದೆ.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಏಳು ದಿವಸಗಳ ವರದಿಯನ್ನು ಮಂಡಿಸಿ, ಗ್ರಾಮದ ಸಾಮಾಜಿಕ, ಅರ್ಥಿಕ ಮತ್ತು ಆರೋಗ್ಯ ಸಮೀಕ್ಷೆಯನ್ನು ಒಳಗೊಂಡ ಹಳ್ಳಿ ಚಿತ್ರಣ ಪುಸ್ತಕದ ಬಿಡುಗಡೆಯನ್ನು ಹಿಮ್ಸ್‌ನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನಿಚಿತಾ ಕುಮಾರಿ ಮಾಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿ ಮಾತಾನಾಡಿದ ಪ್ರಾಂಶುಪಾಲರು, ಶ್ರೀ.ಧರ್ಮಸ್ಥಳ ಆಯುರ್ವೇದ ಕಾಲೇಜಿನ ಡಾ. ಪ್ರಸನ್ನ ನರಸಿಂಹ ರಾವ್ ಮಾತನಾಡಿ, ಈ ಶಿಬಿರವು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಹಾಗೂ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೇ ವಿದ್ಯಾರ್ಥಿಗಳು ಈ ಸೇವಾ ಬಾಂಧವ್ಯವನ್ನು ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು.
ಆದಿಚುಂಚನಗಿರಿ ಕಾಲೆಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ್, ಶಿಬಿರಾರ್ಥಿಗಳು ಈ ಗ್ರಾಮದಲ್ಲಿ ಸ್ವಚ್ಛತೆ, ಪರಿಸರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸಿದ್ದಾರೆ ಇದರಿಂದ ಗ್ರಾಮಸ್ಥರಿಗೆ ಮತ್ತು ಸರಕಾರಿ ಶಾಲೆಗೆ ಅನುಕೂಲವಾಗಿದೆ ಮತ್ತು ಈ ಕಾರ್ಯಗಳನ್ನು ಗ್ರಾಮಸ್ಥರು ಮುಂದುವರಿಸಿಕೊಂಡು ಹೋಗಬೇಕು. ಎಂದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿ.ಎಸ್.ಶಿವರಾಮು ವಳಗೇರಹಳ್ಳಿ, ಈ ಶಿಬಿರದ ಯಶಸ್ಸಿಗೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ.ಧರ್ಮಸ್ಥಳ ಆಯುರ್ವೇದ ಕಾಲೇಜು, ಉಪ ಪ್ರಾಂಶುಪಾಲ ಡಾ.ಯು ಶೈಲಜಾ , ಭಾರತೀಯ ಕಾಫಿ ಮಂಡಳಿಯ ಜಂಟಿ ನಿರ್ದೇಶಕ ಡಾ. ಗುಡ್ಡೇಗೌಡ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ಡಾ.ಬಿ. ಸುಧೀರ್, ಭಾರತೀಯ ದಂತ ವೈದ್ಯಕೀಯ ಸಂಘ ಖಚಾಂಚಿ,ಡಾ.ಜಿ.ಕಾವ್ಯಶ್ರೀ, ಸದಸ್ಯ ಜಯಮ್ಮ, ಹಿಮ್ಸ್‌ನ ರಾ.ಸೇ.ಯೋ ಡಾ.ದರ್ಶನ್.ವಿ,ಹರೀಶ್, ಶುಭಮಂಗಳ, ಲಕ್ಮೀಶ,.ಶಾಂತಯ್ಯ ತೋಪೆಗೌಡ್ರು, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.