ಹಿನ್ನೀರಿನಲ್ಲಿ ಮುಳುಗಿ ಯುವಕ ಆತ್ಮಹತ್ಯೆ

3blrp1
Published on

ಬೇಲೂರು: ಅನಾರೋಗ್ಯ ಕಾರಣದಿಂದ ಮನನೊಂದ ಯುವಕ ಡೆತ್‌ನೋಟ್ ಬರೆದಿಟ್ಟು ಬಿಕ್ಕೋಡು ಸಮೀಪದ ವಾಟೇಹೊಳೆ ಜಲಾಶಯದ ಹೊನ್ನೇಮನೆ ಹಿನ್ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕೋಡು ಗ್ರಾಮದ ಸಂದೀಪ (26) ಆತ್ಮಹತ್ಯೆಗೆ ಶರಣಾದವ. ಸಂದೀಪ ನರರೋಗಕ್ಕೆ ಚಿಕಿತ್ಸೆ ಪಡೆದಿದ್ದನು. ವಾಸಿಯಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ಬುಧವಾರ ಸಂಜೆ ಮನೆಯಿಂದ ಸ್ನೇಹಿತನ ಬೈಕ್‌ನಲ್ಲಿ ಹೋದ ನಂತರ ಆತ ನಾಪತ್ತೆಯಾಗಿದ್ದ. ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದ. ನನ್ನನ್ನು ತಂದೆ, ತಾಯಿ ಕ್ಷಮಿಸಿ ಎಂದು ಸಂದೀಪ ತನ್ನ ಸ್ನೇಹಿತನಿಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹಿನ್ನೀರಿನಲ್ಲಿ ಎರಡು ದಿನ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಶನಿವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ. ತಂದೆ, ತಾಯಿ, ಸಹೋದರಿ ಇದ್ದಾರೆ. ಶನಿವಾರ ಬಿಕ್ಕೋಡಿನಲ್ಲಿ ಅಂತ್ಯಕ್ರಿಯೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net