

ಚನ್ನರಾಯಪಟ್ಟಣ : ಕೆಳಸ್ತರದ ಸಮುದಾಯದ ಸಮಸ್ಯೆ ಆಲಿಸಿ ಪರಿಹರಿಸುವ ಸಲುವಾಗಿ ಇರುವ ಎಸ್ಸಿ,ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯನ್ನು ಕರೆಯದೇ ಪರಿಶಿಷ್ಟರ ರಕ್ಷಣೆಗೆ ತಾಲೂಕು ಆಡಳಿತ ಮುಂದಾಗಿಲ್ಲ ಎಂದು ಆರೋಪಿಸಿ ದಲಿತಸಂಘಟನೆಗಳ ವತಿಯಿಂದ ತಾಲೂಕು ಕಛೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಮಾದಿಗ ದಂಡೋರ ಸಮಿತಿ ಜಿಲ್ಲಾಧ್ಯಕ್ಷ ಸಿ.ಎನ್.ಮಂಜುನಾಥ್ ಮಾತನಾಡಿ, ಎಸ್ಟಿ ಎಸ್ಸಿ ಹಿತರಕ್ಷಣಾ ಸಭೆಯನ್ನು ಪ್ರತಿ ಮೂರು ತಿಂಗಳಿಗೆ ಒಮ್ಮೆ ಕರೆಯಬೇಕು ಎನ್ನುವ ನಿಯಮವಿದ್ದರೂ 10 ತಿಂಗಳಾದರೂ ಸಭೆ ಕರೆಯದೇ ತಹಸೀಲ್ದಾರ್ ಸುಮ್ಮನೆ ಇದ್ದಾರೆ. ಪ್ರತಿಯೊಂದು ಶಾಸಕರ ಅಣತಿಯಂತೆ ನಡೆಯುಬೇಕಾಗಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಆರೋಪಿಸಿದರು.
ತಾಲೂಕಿಗೆ 1400 ಆಶ್ರಯ ಮನೆಗಳು ಮಂಜೂರಾಗಿವೆ. ಇವುಗಳಲ್ಲಿ ಆಸ್ಪೃಶ್ಯ ಸಮುದಾಯದ ವ್ಯಕ್ತಿಗೆ ಒಂದನ್ನೂ ನೀಡದೇತಾರತಮ್ಯವೆಸಗಲಾಗಿದೆ. ತಾಲೂಕಿನಲ್ಲಿರುವ 40 ಸೊಸೈಟಿಗಳಲ್ಲಿ ಎಸ್ಸಿಎಸ್ಟಿ ಸಮುದಾಯದ ಯಾವೊಬ್ಬ ಕಾರ್ಯದರ್ಶಿ ಇಲ್ಲ, ತಳ ಸಮುದಾಯವನ್ನು ಅವಕಾಶಗಳಿಂದ ವಂಚಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣಾಧಿಕಾರಿ ನಮ್ಮಗಳ ಕುಂದುಕೂರತೆ ಕೇಳುತ್ತಿಲ್ಲಾ. ಎಲ್ಲದಕ್ಕೂ ಶಾಸಕರ ಅಣತಿಯಂತೆ ಅಧಿಕಾರಿಗಳು ನಡೆದುಕೊಳ್ಳಬೇಕಾಗಿದೆ. ಇಂತಹ ದುರ್ಬಲ ಅಧಿಕಾರಿಗಳಿಂದ ತಾಲೂಕಿನ ಸಮಸ್ಯೆಗೆ ಪರಿಹಾರವಿಲ್ಲ ಎಂದು ದೂರಿದರು.
ಅಂಬೇಡ್ಕರ್ ಭವನ ದಲಿತರಿಗೆ ಬಳಕೆಯಿಲ್ಲ. ಬಾಬು ಜಗಜೀವನರಾಂ ಭವನ ನಿರ್ಮಾಣ ಮೂಲೆಗುಂಪಾಗಿದೆ.ಚುನಾವಣೆ ವೇಳೆ ಸಮುದಾಯದ ಮಂದಿಗೆ ತುಪ್ಪ ಸವರುವ ಕೆಲಸವಾಗುತ್ತಿದೆ. ಇದಕ್ಕೆಲ್ಲ ಮುಂದೊಂದು ದಿನ ತಕ್ಕ ಉತ್ತರ ಸಿಗಲಿದೆ ಎಂದು ಎಚ್ಚರಿಸಿದರು.
ಹಾಲು ಕೊಳ್ಳದ ಡೇರಿ: ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ತಾಲೂಕಿನ ಪ್ರತಿ ಕಛೇರಿಯಲ್ಲಿ ಲಂಚತನ ತಾಂಡವಾಡುತ್ತಿದೆ. ಕೃಷಿ, ತೋಟಗಾರಿಕೆ ಹಾಗೂ ಹೇಮಾವತಿ ಕಚೇರಿಯಲ್ಲಿ ಬರುವ ಅನುದಾನವೆಲ್ಲಾ ಕೆಲವರಿಗಷ್ಟೆಮೀಸಲಾಗಿದೆ. ಬಂದಿರುವ ಮನೆಗಳ ಹಂಚುವ ವೇಳೆ ತಾರತಮ್ಯ ಮಾಡಲಾಗಿದೆ, ತಾಲೂಕು ಕಛೇರಿ ದೊಡ್ಡ ಭ್ರಷ್ಟಚಾರದ ಕೂಪವಾಗಿದೆ ಎಂದು ಆರೋಪಿಸಿದರು.
ಬೂವನಹಳ್ಳಿ ಗ್ರಾಮದ ಬಸವರಾಜು ಮಾತನಾಡಿ, ಕಳೆದ ೧೬ ವರ್ಷಗಳಿಂದ ಸುಸೂತ್ರವಾಗಿ ನಡೆಯುತ್ತಿದ್ದ ಡೇರಿಯಲ್ಲಿ ಈಗ ರಾಜಕೀಯ ಮೇಲಾಟವಾಗಿದೆ. ಸೆಕೆಟ್ರರಿಯಾಗಿದ್ದ ಬಿ.ಸಿ.ಬಸವರಾಜು ನಿವೃತ್ತಿಯಾಗಿ, ಅವರಸ್ಥಾನಕ್ಕೆ ೮ ಮಂದಿ ಹಾಲಿ ನಿರ್ದೇಶಕರ ಕೋರಿಕೆಯ ಮೇರೆಗೆ ಬಿ.ಎನ್.ಗಂಗಾಧರ್ ಅರವರನ್ನು ನೇಮಕ ಮಾಡಲಾಗಿದೆ. ಇದರ ವಿರುದ್ಧ ಶಾಸಕರ ನಿರ್ದೇಶನದಂತೆ ಹಾಲು ಕೊಂಡ್ಯೊಯಲು ವಾಹನ ಬರುತ್ತಿಲ್ಲ. ಎರಡು ದಿನಗಳಿಂದ ೬೦೦ ಲೀಟರ್‌ನಷ್ಟು ಹಾಲು ವ್ಯರ್ಥವಾಗಿದೆ. ಈ ಬಗ್ಗೆಸೂಪರ್‌ವೈಸರ್ ಕರೆ ಸ್ವೀಕರಿಸುತ್ತಿಲ್ಲ ಎಂದು ದು ಆರೋಪಿಸಿದರು.
ದಲಿತ ಮುಖಂಡರಾದ ಸತೀಸ್, ರಂಗಪ್ಪ, ಕಾಂಗ್ರೆಸ್ ಮುಖಂಡ ಯುವರಾಜು, ಶಂಕರೇಗೌಡ, ವಕೀಲ ಪ್ರಕಾಶ್ ಸೇರಿ ಇತರರು ಇದ್ದರು.