ಹಿಜಾಬ್‌ಗೆ ಅವಕಾಶ ನೀಡಲು ಪಟ್ಟು, ತರಗತಿ ಬಹಿಷ್ಕರಿಸಿ ಪ್ರತಿಭಟನೆ, ವಿಜಯಪುರದಲ್ಲಿ ಹಿಜಾಬ್ ಗದ್ದಲ....!

IMG-20220216-WA0033
Published on

ವಿಜಯಪುರ: ಹಿಜಾಬ್ ಸಹಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿ ಆಗ್ರಹಿಸಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಲ್ಲದೇ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಸರ್ಕಾರಿ ಪಪೂ ಹಾಗೂ ಪದವಿ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆ ಇಂಥದ್ದೊಂದು ಸನ್ನಿವೇಶ ಕಂಡು ಬಂದಿತು.

ಬೆಳಗ್ಗೆ ಎಂದಿನಂತೆ ಕಾಲೇಜು ಆರಂಭಗೊಳ್ಳುತ್ತಿದ್ದಂತೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜ್‌ಗೆ ಆಗಮಿಸಿದರು. ಕೂಡಲೇ ಪ್ರಾಧ್ಯಾಪಕರು ಸರ್ಕಾರದ ಆದೇಶದಂತೆ ಹಿಜಾಬ್ ತೆಗೆದು ತರಗತಿಗೆ ಆಗಮಿಸಲು ಮನವೊಲಿಸುವ ಯತ್ನ ನಡೆಸಿದರು. ಕೆಲ ಕಾಲ ವಾಗ್ವಾದ ಕೂಡ ನಡೆಯಿತು.

ಅಂತಿಮವಾಗಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುವುದಾಗಿ ಪಟ್ಟು ಹಿಡಿದರಲ್ಲದೇ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಹಸೀಲ್ದಾರ್ ಸಿದ್ದರಾಯ ಭೋಸಗಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ವಿದ್ಯಾರ್ಥಿನಿಯರ ಮನವೊಲಿಸುವ ಪ್ರಯತ್ನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net