ಹಿಂದೂಗಳ ಅಭಿಮಾನದಿಂದ ಸಂಘಟನೆ ಶತಮಾನೋತ್ಸವ

2 ckm 4
ಚಿಕ್ಕಮಗಳೂರಿನ ಬಸವನಹಳ್ಳಿ ಸಮೀಪದ ಹಿಂದೂ ಮಹಾಗಣಪತಿ ೧೨ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಆಯೋಜಿಸಿದ್ದ ಆರ್‌ಎಸ್‌ಎಸ್ ೧೦೦ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಪರ್ಕ್ ಪ್ರಮುಖ್ ಯಾದವ ಕೃಷ್ಣ ಮತ್ತೂರು ವಿಶೇಷ ಉಪನ್ಯಾಸ ನೀಡಿದರು. ಅಟೋ ಶಿವಣ್ಣ, ಘನಶ್ಯಾಮ್ ಆಳ್ವ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಹಿಂದುಗಳು ಆರ್‌ಎಸ್‌ಎಸ್ ಬಗ್ಗೆ ಕೌತುಕ, ಕುತೂಹಲ, ಅಭಿಮಾನ ಹಾಗೂ ಅಪಾರವಾದ ಪ್ರೀತಿಯನ್ನು ಹೊಂದಿರುವುದರಿAದ ಸಂಘಟನೆ ಶತಮಾನದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ ಎಂದು ಆರ್‌ಎಸ್‌ಎಸ್ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಪರ್ಕ್ ಪ್ರಮುಖ್ ಯಾದವ ಕೃಷ್ಣ ಮತ್ತೂರು ತಿಳಿಸಿದರು.

ನಗರದ ಬಸವನಹಳ್ಳಿ ಸಮೀಪದ ಹಿಂದೂ ಮಹಾಗಣಪತಿ ೧೨ನೇ ವರ್ಷದ ಗಣೇಶೋತ್ಸವ ಪ್ರಯುಕ್ತ ಆಯೋಜಿಸಿದ್ದ ಆರ್‌ಎಸ್‌ಎಸ್ ೧೦೦ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರ ತ್ಯಾಗ, ಬಲಿದಾನ ಹಾಗೂ ವೈಯಕ್ತಿಕ ಬದುಕನ್ನು ಸಂಘ ಪರಿವಾರಕ್ಕೆ ಮುಡಿಪಿಟ್ಟಿದ್ದರಿಂದ ಸಮಸ್ತ ಹಿಂದುಗಳು ಒಂದಾಗಲು ಸಾಧ್ಯವಾಗಿದೆ. ಆರಂಭದಲ್ಲಿ ಕೆಚ್ಚೆದೆಯ ೨೦ ನವತರುಣರ ಸಂಘಟನೆ ಇದೀಗ ಬೃಹದಾಕಾರವಾಗಿ ಬೆಳೆದು ರಾಷ್ಟಾçದ್ಯಂತ ಶಾಖೆಗಳನ್ನು ವಿಸ್ತ ರಿಸಿದೆ ಎಂದು ತಿಳಿಸಿದರು.

ಬ್ರಿಟೀಷರ ಆಳ್ವಿಕೆಯಲ್ಲಿ ದೇಶದ ಜನತೆ ಹಿಂದುಗಳೆನ್ನಲು ನಾಚಿಕೆಪಡುತ್ತಿದ್ದರು. ವಂದೇ ಮಾತರಂ ಗೀತೆ ಹಾಡುವುದು ಅಪರಾಧವಾಗಿತ್ತು. ಇವುಗಳನ್ನು ಹೆಡ್ಗೆವಾರ್ ಅವರು ಬಾಲ್ಯದಿಂದಲೇ ಖಂಡಿಸುತ್ತಿದ್ದರು. ಶಾಲೆಯಲ್ಲೇ ಶೌರ್ಯದಿಂದಲೇ ಬ್ರಿಟಿಷರ ವಿರುದ್ಧ ಧಿಕ್ಕಾರ ಕೂಗಿ ತಿಲಕರ ಆಶಯವನ್ನು ನಶಿಸÀದಂತೆ ಕಾಪಾಡಿದವರು ಎಂದರು.

ಜನ್ಮದಾತೆ ಭಾರತಾಂಭೆಯ ಕೂಸುಗಳಾದ ಹಿಂದುಗಳನ್ನು ಒಗ್ಗೂಡಿಸಲು ೧೯೨೫ರಲ್ಲಿ ಸಂಘಟನೆ ಸ್ಥಾಪಿಸಿ ಹಿಂದೂವಿರೋಧಿ ಚಟುವಟಿಕೆ ವಿರುದ್ಧ ಚಳವಳಿ ನಡೆಸಿ ಹೋರಾಡಿದ್ದರು. ಕೆಲವರು ಕೇಶವಜೀ ಅವರ ಹಿಂದೂಪ್ರೇಮವನ್ನು ಅಪಹಾಸ್ಯ ಮಾಡುತ್ತಿದ್ದರು. ಚಳವಳಿಯಿಂದ ಏನನ್ನು ಸಾಧಿಸಲಾರೆ ಎಂಬ ಟೀಕೆಗಳ ನಡುವೆಯೇ ರಾಷ್ಟçಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಎಂದು ವಿವರಿಸಿದರು.

ರಾಷ್ಟçದ ಮೂಲೆ ಮೂಲೆ ಹಾಗೂ ಕಾಡಿನ ಮಧ್ಯೆ ವಾಸಿಸುವ ಜನರು ಹಿಂದೂಗಳೆAಬ ಪರಿಕಲ್ಪನೆಗೆ ಮೂಲವೇ ಸಂಘಟನೆ ಸಿದ್ದಾಂತ, ತತ್ವಗಳು. ಇಂದೀಗೂ ದೇಶದ ನಾನಾ ಭಾಗಗಳಲ್ಲಿ ಪ್ರವಾಹ, ನೆರೆ ಹಾವಳಿ, ಭೂಕುಸಿತದಂಥ ದುರ್ಘಟನೆಗಳು ಸಂಭವಿಸಿದರೆ ಸ್ವಯಂಪ್ರೇರಿತರಾಗಿ ಸಂಘಟನೆ ಕಾರ್ಯಕರ್ತರು ತೆರಳಿ ಆಪತ್ತಿನಲ್ಲಿರುವ ಜನರನ್ನು ಜಾತಿ, ಧರ್ಮ ಲೆಕ್ಕಿಸದೇ ರಕ್ಷಿಸುವ ಕಾರ್ಯ ಮಾಡುತ್ತಾರೆ ಎಂದರು.

ಸAಘಟನೆಯಲ್ಲಿರುವ ಯುವಕರು ಸದೃಢ ರಾಷ್ಟç ಹಾಗೂ ಹಿಂದುತ್ವದ ಉಳಿವಿಗಾಗಿ ಸಂಪೂರ್ಣ ಜೀವನವನ್ನು ದೇಶಕ್ಕಾಗಿ ಮೀಸಲಿಟ್ಟಿದ್ದಾರೆ. ಫಲಾಪೇಕ್ಷೆ ಇಲ್ಲದೇ ಸೇವಾಮನೋಭಾವ ಮೂಡಿಸಿದ ಆರ್‌ಎಸ್‌ಎಸ್ ಸಂಘಟಕರು, ದೇಶ ಮೊದಲು ಎಂಬ ನಿರ್ಣಯ ಕೈಗೊಂಡು ಸಮಾಜದ ಪರಿವರ್ತನೆ ಹಾಗೂ ರಾಷ್ಟçವನ್ನು ವೈಭವದತ್ತ ಕೊಂಡೊಯ್ಯುಲು ಮುಂದಾಗುತ್ತಿದ್ದಾರೆ ಎಂದು ತಿಳಿಸಿದರು.

ಪ್ರಸ್ತುತ ಆರ್‌ಎಸ್‌ಎಸ್ ಸಂಘಟನೆ ಕುಟುಂಬ ಪ್ರಬೋಧನಾ, ಆಹಾರ ಪದ್ಧತಿ, ಸಾಮರಸ್ಯ ಹಾಗೂ ಸ್ವದೇಶಿ ಬಳಕೆ ಎಂಬ ಅಂಶಗಳನ್ನು ಅಳಡಿಸಿಕೊಂಡು ದೇಶ-ವಿದೇಶಗಳಲ್ಲಿ ಪರಿವರ್ತನೆಗೆ ಸಜ್ಜಾಗುತ್ತಿದೆ. ಹಿಂದೂಗಳಿAದ ಜಗತ್ತಿನಲ್ಲಿ ದೊಡ್ಡ ಬದಲಾವಣೆಗಳಾಗಲಿವೆೆ. ಹಿಂದೂಗಳಿಲ್ಲದಿದ್ದರೆ ವಿಶ್ವಕ್ಕೆ ದೊಡ್ಡ ಆಪತ್ತು ಶತಸಿದ್ಧ ಎಂದರು.

ಶತಮಾನದ ಸಂಭ್ರಮದಲ್ಲಿರುವ ಸಂಘಟನೆಗೆ ಯಾರು ಬೇಕಾದರೂ ದಾಖಲಾಗಬಹುದು. ಇಂದಿಗೂ ಸದಸ್ಯತ್ವ, ರಶೀದಿಪುಸ್ತಕವಿಲ್ಲದೇ ಕೋಟ್ಯಾಂತರ ಸಂಘಟಕರನ್ನು ಹೊಂದಿರುವ ಏಕೈಕ ಹಿಂದು ಸಂಘಟನೆ ಆರ್‌ಎಸ್‌ಎಸ್. ಈ ಸಂಘಕ್ಕೆ ದ್ವಾರವಿಲ್ಲದ ಕಾರಣ ಭಾರತವು ಇಂದು ವಿಶ್ವಗುರುವಾಗಲು ಹೊರಟಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಜಿಲ್ಲಾ ಸಂಘ ಸಂಚಾಲಕ ಘನಶ್ಯಾಮ್ ಆಳ್ವ, ಹಿಂದೂ ಮಹಾ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ, ಸದಸ್ಯರಾದ ಸಂತೋಷ್ ಕೋಟ್ಯಾ ನ್, ಶ್ಯಾಮ್.ವಿ.ಗೌಡ, ಸುನೀಲ್ ಆಚಾರ್ಯ, ಅಮೀತ್, ಕಿಶೋರ್, ನಯನ್, ಗೌತಮ್, ಆಕಾಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net