ಹಿಂದುಳಿದ, ಶೋಷಿತ ವರ್ಗಗಳ ಧ್ವನಿ

20 hbd 01
Published on

ಹುಮನಾಬಾದ್: ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಸಾಮಾಜಿಕ ನ್ಯಾಯದ ಹರಿಕಾರರಾಗಿ, ಹಿಂದುಳಿದ, ಶೋಷಿತ ವರ್ಗಗಳ ಜನರ ಕಲ್ಯಾಣಕ್ಕಾಗಿ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.


ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ೧೦೮ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಹಾಗೂ ಬಡವರ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಲು ವಸತಿ ನಿಲಯ ಆರಂಭಿಸಿದ್ದರು. ಪ್ರಸ್ತುತ ವಸತಿ ನಿಲಯಗಳ ಸೌಲಭ್ಯಗಳು ದೊರೆಯುವಲ್ಲಿ ಅವರ ಕೊಡುಗೆ ಅಪಾರ ಎಂದರು.


ಸಮಾಜದಲ್ಲಿ ತುಳಿತಕ್ಕೊಳಗಾದವರು, ಹಿಂದುಳಿದ ವರ್ಗದವರು ಗಟ್ಟಿ ಧ್ವನಿಯಲ್ಲಿ ಮಾತನಾಡಲು ದೇವರಾಜ ಅರಸು ಕಾರಣ. ಅರಸು ಅವರ ಆದರ್ಶ, ತತ್ವಗಳನ್ನು ಪಾಲಿಸಿದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ದುರ್ಬಲರನ್ನು ಸಬಲರನ್ನಾಗಿಸಲು ಸಾಧ್ಯ ಎಂದರು. ಸಾಹಿತಿ ಮಾಣಿಕ ನೇಳಗಿ ಉಪನ್ಯಾಸ ನೀಡಿದರು. ವಸತಿ ನಿಲಯ ಪಾಲಕ ಸುರೇಶ ಮಳಖೇಡ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ಅಂಜುಮ್ ತಬಸುಮ್ ಅಧ್ಯಕ್ಷತೆ ವಹಿಸಿದರು. ವಸತಿ ನಿಲಯದ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು.

ಗ್ರೇಡ್-೨ ತಹಸೀಲ್ದಾರ್ ಮಂಜುನಾಥ ಪಂಚಾಳ, ಬಿಇಒ ವೆಂಕಟೇಶ ಗುಡಾಳ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋವಿಂದ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಲಕ್ಷಿö್ ನಾಯಕ, ಎಎಸ್‌ಐ ದೇವೇಂದ್ರಪ್ಪ, ನಿಲಯ ಪಾಲಕ ಬಸವರಾಜ ಸುಭಾಜಿ ಇತರರಿದ್ದರು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಠಲ್ ಸೇಡಂಕರ್ ಸ್ವಾಗತಿಸಿದರು. ವ್ಯವಸ್ಥಾಪಕ ಪೈಗಂಬರ ವಂದಿಸಿದರು. ಆನಂದ ಶಿವನಾಯಕ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net