ಹಿಂದುಳಿದ ರ‍್ಗಗಳ ವಿಚಾರ ಗೋಷ್ಠಿ 13ರಂದು

Avvanna Myakeri
Published on

ಕಲಬುರಗಿ: ಕೇಂದ್ರ ಸರ್ಕಾರವೂ 95  ವರ್ಷದ ನಂತರ ನಡೆಸುತ್ತಿರುವ ಜಾತಿ ಜನಗಣತಿಯ ಬಗ್ಗೆ ಜಾಗೃತಿ ಮೂಡಿಸಲು ನಗರದ ಸೇಡಂ ರಸ್ತೆಯಲ್ಲಿನ ಚಂದ್ರಶೇಖರ ಪಾಟೀಲ್​ ವಸತಿ ನಿಲಯದ ಬಳಿಯ ಸ್ಯಾಕ್​ ಸಭಾಂಗಣದಲ್ಲಿ ಜು.೧೩ರಂದು ಬೆಳಗ್ಗೆ ೧೧ಕ್ಕೆ ಹಿಂದುಳಿದ ರ‍್ಗಗಳ ಸಮುದಾಯದ ವಿಭಾಗ ಮಟ್ಟದ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಓಬಿಸಿ ಮರ‍್ಚಾ ರಾಜ್ಯ ಪ್ರಧಾನ ಕರ‍್ಯರ‍್ಶಿ ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆಯಿಂದ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಕಲಬುರಗಿ, ಯಾದಗಿರಿ, ಬೀದರ್​ ಜಿಲ್ಲೆಯ ಹಿಂದುಳಿದ ರ‍್ಗಗಳ ಸಮುದಾಯಗಳ ಸಂಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಬುದ್ಧಿ ಜೀವಿಗಳು, ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಚಾರಗೋಷ್ಠಿಗೆ ಉಡುಪಿ ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಮುಖ್ಯ ಭಾಷಣಕಾರರಾಗಿದ್ದು, ಬೆಂಗಳೂರಿನ ಇನ್​ಸೈಟ್​ ಐಎಎಸ್​ ಕೋಚಿಂಗ್​ ಕೇಂದ್ರದ ವಿನಯಕುಮಾರ, ಕೊಡಗು, ಮೈಸೂರು ಸಂಸದ ಯದುವೀರ ಒಡೆಯರ್​ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಾಮರಸ್ಯ ವಿಭಾಗದ ಮುಖ್ಯಸ್ಥ ವಾದಿರಾಜ ಭಾಗವಹಿಸಲಿದ್ದಾರೆ ಎಂದರು.

ಕರ‍್ಯಕ್ರಮದಲ್ಲಿ ವಿಶ್ವರ‍್ಮ, ಕೋಲಿ, ಕುರುಬ, ಸವಿತಾ, ಹಡಪದ, ಮಡಿವಾಳ, ಎಸ್​ಎಸ್​ಕೆ, ಸಾಳಿ, ಬೋಯಿ, ಹೂಗಾರ, ಕುಂಬಾರ, ಕಂಬಾರ, ನೇಕಾರ, ಗಾಣಿಗ, ಈಡಿಗ, ಕಟಬರ್​, ಉಪ್ಪಾರ, ಗೌಳಿ, ಹೆಳವ, ಯಾದವ, ಗೊಂದಳಿ, ಮರಾಠ, ಮಾಲಗಾರ, ಭಾವಸಾರ ಕ್ಷತ್ರೀಯ ಸೇರಿ ಹಿಂದುಳಿದ ರ‍್ಗಗಳ ಸುಮಾರು ೨೬ ಸಮಾಜದ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

೪೫ ರ‍್ಷ ಆಡಳಿತ ನಡೆಸಿದ ಕಾಂಗ್ರೆಸ್​ ಹಿಂದುಳಿದ ರ‍್ಗದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ೯೫ ರ‍್ಷದಲ್ಲಿ ಒಮ್ಮೆಯೂ ಜಾತಿ ಜನಗಣತಿ ಮಾಡದೇ ಕಾಂಗ್ರೆಸ್​ ಮೋಸ ಮಾಡಿದೆ. ಆರು ಜನಗಣತಿ ಕಾಂಗ್ರೆಸ್​ ಕಾಲದಲ್ಲಿ ನಡೆದಿದ್ದರೂ ಒಮ್ಮೆಯೂ ಜಾತಿ ಜನಗಣತಿ ಮಾಡಿಸದೇ ಅನ್ಯಾಯ ಮಾಡಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಲು ವಿರೋಧಿಸಿದ್ದು, ಕಾಂಗ್ರೆಸ್​. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವರು ೧೦೨ನೇ ತಿದ್ದುಪಡಿ ಮಾಡಿ, ರಾಷ್ಟ್ರೀಯ ಹಿಂದುಳಿದ ರ‍್ಗಗಳ ಆಯೋಗ ರಚಿಸಿ, ಸಾಂವಿಧಾನಿಕ ರಕ್ಷಣೆ ನೀಡಿದ್ದಾರೆ ಎಂದರು.

ಕಾಡಾ ಮಾಜಿ ಅಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ, ಓಬಿಸಿದವರಿಗೆ ಕಾಂಗ್ರೆಸ್​ ಸತತ ಮೋಸ ಮಾಡುತ್ತಲೇ ಬಂದಿದೆ. ೨೦೨೭ರಲ್ಲಿ ರ‍್ನಾಟಕ ಸೇರಿ ದಣ ಭಾರತದಲ್ಲಿ ಗಣತಿ ನಡೆಯಲಿದ್ದು, ಜಾಗೃತಿ ಮೂಡಿಸಿ ಸಕ್ರೀಯವಾಗಿ ಪಾಲ್ಗೊಳ್ಳಲು ಸಮಾವೇಶವೂ ಪೂರಕವಾಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಪ್ರಮುಖರಾದ ಲಿಂಗರಾಜ ಬಿರಾದಾರ, ದಿಲೀಪ ಪಾಟೀಲ್​, ಸಂಜಯ ಮಿಸ್ಕಿನ್​, ದೇವಿಂದ್ರ ದೇಸಾಯಿ ಕಲ್ಲೂರ, ಹಣಮಂತರಾವ ಹೂಗಾರ, ಮಲ್ಲಿಕರ‍್ಜುನ ಎಮ್ಮೆನೂರ, ರೇವಣಸಿದ್ದ ಸಂಕಾನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net